ಯೂಟ್ಯೂಬ್ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿ ಹತ್ಯೆ ಮಾಡಿದ 15 ವರ್ಷದ ಬಾಲಕಿ..!

0

ನಾಗಪುರ: 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿ ನಂತರ ಮಗುವನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯದ ಬಲಿಪಶುವಾಗಿದ್ದ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಳು ಯೂಟ್ಯೂಬ್ ನೋಡಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯ ಬಳಿಕ ಆಗತಾನೇ ಹುಟ್ಟಿದ ಕಂದನನ್ನು ಆಕೆ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಾಲಕಿ ಗರ್ಭಾವಸ್ಥೆಯ ಸಮಯದಲ್ಲಿ ಹೊಟ್ಟೆ ಊದಿರುವುದನ್ನು ಕಂಡು ತಾಯಿ ವಿಚಾರಿಸಿದಾಗ ಆರೋಗ್ಯ ಸರಿ ಇಲ್ಲ ಎಂದು ಸುಳ್ಳು ಹೇಳಿದ್ದಳು. ಅಲ್ಲದೇ ಈ ರಹಸ್ಯವನ್ನು ಅಡಗಿಸಿಕೊಳ್ಳಲು ಆಕೆ ಮನೆಯಲ್ಲೇ ಹೆರಿಗೆ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್‌ನಲ್ಲಿ ಹಲವು ವೀಡಿಯೋಗಳನ್ನು ನೋಡಿದ್ದಳು. ನಂತರ ಮಾರ್ಚ್ 2 ರಂದು ಆಕೆ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಜನ್ಮ ನೀಡಿದ ತಕ್ಷಣವೇ ಮಗುವನ್ನು ಕತ್ತು ಹಿಸುಕಿ ಕೊಂದ ಆಕೆ ಮಗುವಿನ ಶವವನ್ನು ಬಾಕ್ಸೊಂದರಲ್ಲಿ ಹಾಕಿ ಮನೆಯಲ್ಲೇ ಇರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗ್ಪುರದ ಅಂಬಝರಿ ಪ್ರದೇಶದಲ್ಲಿ (Ambazari area) ಈ ಘಟನೆ ನಡೆದಿದೆ. ಹೊರಗೆ ಹೋಗಿದ್ದ ತಾಯಿ ಮನೆಗೆ ಬಂದಾಗ ಮಗಳ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಈ ಬಗ್ಗೆ ಕೇಳಿದಾಗ ಆಕೆ ಘಟನೆಯನ್ನು ವಿವರಿಸಿದ್ದಾಳೆ. ನಂತರ ತಾಯಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ನಂತರ ಮೃತ ನವಜಾತ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಪೋಸ್ಕೊ ಕಾಯಿದೆಯಡಿ ಈ ಬಗ್ಗೆ ಕೇಸು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದು, ಹೆಚ್ಚಿನ ತನಿಖೆ (investigation) ನಡೆಯುತ್ತಿದೆ.

About Author

Leave a Reply

Your email address will not be published. Required fields are marked *

You may have missed