ಒಂದೇ ಸಿರಿಂಜ್ ನಿಂದ ಹಲವು ರೋಗಿಗಳಿಗೂ ಇಂಜೆಕ್ಷನ್ ಕೊಟ್ಟ ವೈದ್ಯ; ಬಾಲಕಿಗೆ HIV ಪಾಸಿಟಿವ್

0

ವದೆಹಲಿವೈದ್ಯರ ಬೇಜವಾಬ್ದಾರಿಯಿಂದಾಗಿ ಬಾಳಿ ಬದುಕಬೇಕಾದ ಪುಟ್ಟ ಬಾಲಕಿಗೆ ಎಚ್‌ಐವಿ ಸೋಂಕು ತಗುಲಿದೆ. ಈ ಘಟನೆ ಉತ್ತರ ಪ್ರದೇಶದ ಇಟಾಹ್‌ ನಗರದಲ್ಲಿ ನಡೆದಿದೆ. ಅಲ್ಲಿನ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಒಂದೇ ಸೂಜಿಯಿಂದ ಹಲವು ರೋಗಿಗಳಿಗೆ ಇಂಜೆಕ್ಷನ್‌ ಕೊಟ್ಟ ಪರಿಣಾಮ ಬಾಲಕಿಗೆ ಎಚ್‌ಐವಿ ಪಾಸಿಟಿವ್‌ ಸೋಂಕು ತಗುಲಿದೆ.

ಈ ಕುರಿತಂತೆ ರಾಣಿ ಆವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಿಂದ ವರದಿಯನ್ನು ಕೇಳಲಾಗಿದೆ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್‌ ಪಾಠಕ್‌ ತಿಳಿಸಿದ್ದಾರೆ.

ಮಗುವಿಗೆ ಎಚ್‌ಐವಿ ಪಾಸಿಟಿವ್‌ ಆಗಿದೆ ಎಂದು ವರದಿಯಾದ ಬಳಿಕ ಈ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಠಕ್‌ ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಂಕಿತ್‌ ಕುಮಾರ್‌ ಅಗರವಾಲ್‌ ಅವರಿಗೆ ಈ ಕುರಿತಾಗಿ ಬಾಲಕಿಯ ಪೋಷಕರು ದೂರು ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಿದ್ದ ವೇಳೆ ಒಂದೇ ಸಿರಿಂಜ್‌ನಿಂದ ಹಲವಾರು ರೋಗಿಗಳಿಗೆ ವೈದ್ಯರು ಇಂಜೆಕ್ಷನ್‌ ನೀಡಿದ್ದಾರೆ. ಈ ವೇಳೆ ತಮ್ಮ ಪುತ್ರಿಗೂ ಇಂಜೆಕ್ಷನ್‌ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ.

ಫೆಬ್ರವರಿ 20 ರಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಮಗುವಿಗೆ ಎಚ್‌ಐವಿ ಪಾಸಿಟಿವ್‌ ಎಂದು ಪತ್ತೆಯಾದಾಗ ಆರೋಗ್ಯ ಕಾರ್ಯಕರ್ತರು ರಾತ್ರೋರಾತ್ರಿ ಆಸ್ಪತ್ರೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ನನಗೆ ಮಾಹಿತಿ ಲಭಿಸಿದೆ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಇಟಾಹ್‌ ಸಿಎಂ ಉಮೇಶ್‌ ಕುಮಾರ್‌ ತ್ರಿಪಾಠಿ ಹೇಳಿದ್ದಾರೆ. ಸೂಕ್ತ ತನಿಖೆಯ ನಂತರ ಅದರ ವರದಿಗಳನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಿದ್ದೇವೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed