ಕೆರೆ ಬಳಿ ಆಟ ಆಡುವಾಗ ಆಯತಪ್ಪಿ ಬಿದ್ದು 4 ವರ್ಷದ ಬಾಲಕ ಸಾವು

0

ಬೆಂಗಳೂರು: ಕೆರೆಯ ಬಳಿ ಆಟ ಆಡುತ್ತಿದ್ದ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್‌ನಲ್ಲಿ (Anekal) ನಡೆದಿದೆ.

ಆನೇಕಲ್ ತಾಲೂಕಿನ ಗಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಕ್ತಿ (4) ಮೃತ ಬಾಲಕ.

ಬಾಲಕನ ಪೋಷಕರು ಮಾಗಡಿ ರಸ್ತೆಯ ಅಗ್ರಹಾರ ಮೂಲದವರಾಗಿದ್ದಾರೆ. ಬಾಲಕ ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರಕ್ಕೆ (Naganathapura) ತನ್ನ ಅಜ್ಜಿ ಮನೆಗೆಂದು ಬಂದಿದ್ದು, ಕೆರೆ (Lake) ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಘಟನೆ ನಡೆದ ಬಳಿಕ ಅಗ್ನಿಶಾಮಕ ದಳ (Fire Brigade) ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಸುಮಾರು 24 ಗಂಟೆಗಳ ಕಾಲ ಬಾಲಕನಿಗಾಗಿ ಕಾರ್ಯಾಚರಣೆ ನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡುವ ಸಂದರ್ಭ ಪೋಷಕರು ಅಡ್ಡಿಪಡಿಸಿದ್ದಾರೆ. ಕೊನೆಗೆ ಅವರ ಮನವೊಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

You may have missed