ವಿಮಾನದಲ್ಲಿ ಬಂದು ಹೈ ಫೈ ಕಳ್ಳತನ ಮಾಡ್ತಿದ್ದ ಕೈಗೆ ಬಿತ್ತು ಕೋಳ: ರೋಚಕ ಕಹಾನಿ

0

ಮಂಡ್ಯ: ಅವ್ರೆಲ್ಲಾ ಐಷಾರಾಮಿ ಜೀವನದ ದಾಸರಾಗಿದ್ರು.. ಮಾತೆತ್ತಿದ್ರೆ ಫ್ಲೈಟ್ (flight)ನಲ್ಲಿ ಪ್ರಯಾಣ, ಕಾರಿನಲ್ಲೇ ಸುತ್ತಾಟ. ಹೀಗೆ ಶೋಕಿ ಮಾಡ್ಕೊಂಡು ತಿರುಗುತ್ತಿದ್ದವರ ಅಸಲಿಯತ್ತು ಈಗ ಬಯಲಾಗಿದೆ. ಕಂಡವರ ಮನೆಗೆ ಕನ್ನ ಹಾಕಿ (house theft) ಮೆರೆಯುತ್ತಿದ್ದವರ ಕೈಗೆ ಕೋಳ ಬಿದ್ದಿದೆ.

ಅಷ್ಟಕ್ಕೂ ಪೊಲೀಸರ ಕೈಗೆ (mandya police) ತಗಲಾಕಿಕೊಂಡವರಾದರೂ ಯಾರು? ಬಂಧಿತರ (arrest) ಅಸಲಿಯತ್ತೇನು? ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ.

ಫ್ಲೈಟ್ ನಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಅಂದರ್!! ಹೈ ಫೈ ಕಳ್ಳನ ಕೈಗೆ ಕೋಳ ತೊಡಿಸುವಲ್ಲಿ ಯಶಸ್ವಿಯಾದ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು..!!

ಕಳ್ಳತನವನ್ನೆ ಪ್ರೊಫೆಷನ್ ಆಗಿ ಮಾಡ್ಕೊಂಡು ಸಿಕ್ಕ ಸಿಕ್ಕ ಮನೆಯನ್ನ ದೋಚುತ್ತಿದ್ದ ಐನಾತಿಯನ್ನು ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಅಂದರ್ ಮಾಡಿದ್ದಾರೆ. ವಿಜಯ್ ಸುರೇಶ್ ಬೋಸ್ಲೆ ಎಂಬ ಖದೀಮ ಫ್ಲೈಟ್ ನಲ್ಲಿ ಬಂದು ಬೆಂಗಳೂರಿನಲ್ಲಿ ಲ್ಯಾಂಡ್ ಆಗ್ತಿದ್ದ. ಬಳಿಕ ತನ್ನ ಶಿಷ್ಯ ಮಂಡ್ಯ ಮೂಲದ ಶ್ರೀನಿವಾಸ್ ಆಣತಿಯಂತೆ ಬೆಂಗಳೂರಿನಿಂದ ಕಾರಿನಲ್ಲಿ ಬರ್ತಾಯಿದ್ದ.

ಹೀಗೆ ಬಂದವನು ಲಾಡ್ಜ್ ನಲ್ಲಿ ತಂಗಿದ್ದು, ಬಳಿಕ ಮನೆಗಳ್ಳತನವೆಸಗಿ ವಾಪಸ್ ಮಹಾರಾಷ್ಟ್ರಕ್ಕೆ ಹೋಗ್ತಾಯಿದ್ದ. ಕದ್ದ ಮಾಲನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಬಾರ್, ಪಬ್ ಎಂದು ಇಬ್ಬರೂ ಶೋಕಿ ಮಾಡ್ತಾಯಿದ್ದರು. ಹಣ ಖಾಲಿ ಆದ್ಮೇಲೆ ಮತ್ತೆ ಫೀಲ್ಡ್ ಗೆ ಇಳಿಯುತ್ತಿದ್ದ ಜೋಡಿ, ಮತ್ತೆ ಮನೆಗಳ್ಳತನ ಮಾಡಿ ಗಾಯಬ್ ಆಗ್ತಾಯಿದ್ದರು.

ಅಸಲಿಗೆ ಈ ವಿಜಯ್ ಸುರೇಶ್ ಬೋಸ್ಲೆ ಯಾರು? ಆತನಿಗೂ ಮಂಡ್ಯ ಜಿಲ್ಲೆಗೂ ಏನು ಸಂಬಂಧ? ಎಂದು ನೋಡುವುದಾದರೆ. ಕಳ್ಳತನ ಪ್ರಕರಣವೊಂದರ ಸಂಬಂದ ಈ ಹಿಂದೆ ಇದೇ ಬೋಸ್ಲೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಅದೇ ರೀತಿ ಮಂಡ್ಯ ಶ್ರೀನಿವಾಸ ಕೂಡ ಕಳ್ಳತನ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾಗ ಪರಿಚಯವಾಗಿದ್ದಾರೆ.

ಅದೇ ರೀತಿ ಉಡುಪಿಯ ರಕ್ಷಕ್ ಪೂಜಾರಿ, ಶಿವಮೊಗ್ಗದ ಪ್ರವೀಣ ಎಲ್ಲರೂ ಸೇರಿ ಒಂದು ಗ್ಯಾಂಗ್ ಮಾಡ್ಕೊಂಡಿದ್ದಾರೆ. ಬೋಸ್ಲೆ ಯಾವುದಾದ್ರು ಕೇಸ್ ಮಾಡ್ಕೊಂಡು ಬಂದ್ರೆ ಆತನಿಗೆ ಮಂಡ್ಯದಲ್ಲಿ ಇದೇ ಶ್ರೀನಿವಾಸ ಅಲಿಯಾಸ್ ಸೀನಾ ಷೆಲ್ಟರ್ ಕೊಡ್ತಾಯಿದ್ದ. ಹಾಗಾಗಿ ಇವರಿಬ್ಬರ ನಡುವೆ ಬಾಂಡಿಂಗ್ ಚೆನ್ನಾಗಿಯೇ ಬೆಳೆದಿತ್ತು.

ಜೀವನದಲ್ಲಿ ಬೆವರು ಸುರಸಿ, ಮೈ ಕೈ ಹಣ್ಣು ಮಾಡಿಕೊಳ್ಳದೆಯೇ ದುಡ್ಡು ಮಾಡಬೇಕು ಐಷಾರಾಮಿ ಜೀವನ ನಡೆಸಬೇಕು ಎಂದು ಪ್ಲಾನ್ ಹಾಕಿಕೊಂಡ ಈ ತಂಡ, ಮಂಡ್ಯ ಜಿಲ್ಲೆಯಲ್ಲೆ ಬರೋಬ್ಬರಿ 9 ಮನೆಗಳಿಗೆ ಕನ್ನ ಹಾಕಿತ್ತು. ಮನೆ ಬಿಟ್ಟು ದೂರದ ಊರಿಗೆ ಹೋಗುವವರನ್ನೆ ಟಾರ್ಗೆಟ್ ಮಾಡ್ತಾಯಿದ್ದ ಶ್ರೀನಿವಾಸ ತನ್ನ ಬಾಸ್ ಬೋಸ್ಲೆಗೆ ಮಾಹಿತಿ ಕೊಟ್ಟು ಮಂಡ್ಯಕ್ಕೆ ಕರೆಸಿಕೊಳ್ಳುತ್ತಿದ್ದ. ಕತ್ತಲಾದ ಬಳಿಕ ಯಾರಿಗೂ ತಿಳಿಯದಂತೆ ಮನೆ ಬೀಗ ಒಡೆದು ಕೈಗೆ ಸಿಕ್ಕಿದ ಚಿನ್ನಾಭರಣವನ್ನ ದೋಚಿ ಪರಾರಿಯಾಗ್ತಾ ಇದ್ದರು.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಪೂರ್ಣೇಶ್ವರಿನಗರದ ಶ್ರೀಧರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು.. ಹೆಚ್.ಬಿ.ಟಿ ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ಈಗ ಬೋಸ್ಲೆ, ಶ್ರೀನಿವಾಸ ಸೇರಿದಂತೆ ನಾಲ್ಕು ಮಂದಿ ಮನೆಗಳ್ಳರ ಕೈಗೆ ಕೋಳ ತೊಡಿಸಿದೆ.

ಖಾಕಿ ವಿಚಾರಣೆ ವೇಳೆ ಈ ಕ್ರಿಮಿಗಳು ಬರಿ ಒಂದು ಮನೆ ದೋಚಿದ್ದಲ್ಲಾ ಬರೋಬ್ಬರಿ 9 ಮನೆಗಳನ್ನ ಲೂಟಿ ಮಾಡಿದ್ದಾಗಿ ತಿಳಿದು ಬಂದಿದ್ದು ಆರೋಪಿಗಳ ಕೈಗೆ ಕೋಳ ತೊಡಿಸಿದ ಪೊಲೀಸರು ಈಗ 11 ಲಕ್ಷ ಮೌಲ್ಯದ ಬರೋಬ್ಬರಿ 183 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡಿದ್ದಾರೆ. ಅದೇನೆ ಹೇಳಿ ಕಷ್ಟ ಪಟ್ಟು ದುಡಿಯದೆ ಅಡ್ಡದಾರಿ ಹಿಡಿದವರಿಗೆ ಖಾಕಿ ಪಡೆ ತಕ್ಕ ಶಾಸ್ತಿ ಮಾಡಿದೆ.

About Author

Leave a Reply

Your email address will not be published. Required fields are marked *

You may have missed