ದೇಸಿ ಕ್ರೀಡೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ: ಡಾ. ಎ ಆರ್ ಬೆಳಗಲಿ

0

ಬಾಗಲಕೋಟೆ: ಭಾರತ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ದೇಸಿ ಕ್ರೀಡೆ ಮತ್ತು ನಮ್ಮ ಸಂಸ್ಕೃತಿ ಉಳಿಸಲು ಮುಂದಾಗಬೇಕು. ವಿವಿಧ ಜಿಲ್ಲೆ ರಾಜ್ಯಗಳಿಂದ ಜನರು ಆಗಮಿಸಿ ಸ್ಪರ್ಧೆಯ ರೋಮಾಂಚನಕಾರಿ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದು ನಮ್ಮಗೆ ಸಂತಸವೆನಿಸುತ್ತಿದೆ. ಕರ್ನಾಟಕ, ಆಂದ್ರ, ಮಹಾರಾಷ್ರ್ಟ ಸೇರಿಸದಂತೆ ವಿವಿಧ ರಾಜ್ಯಗಳಿಂದ 131 ಜೋಡಿ ಎತ್ತುಗಳು ತೆರಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ದೇಸಿ ಕ್ರೀಡೆಗಳನ್ನು ಉಳಿಸುವ ಬೆಳೆಸುವ ಕಾರ್ಯ ಎಲ್ಲ ಜನರಿಂದ ಆಗಬೇಕಾಗುವ ಅವಶ್ಯಕತೆ ಇದೆ. ಮಹಾಲಿಂಗಪುರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಬಂದಿರುವುದು ಖುಷಿ ವಿಚಾರ.

ಇತ್ತೀಚಿನ ದಿನಗಳಲ್ಲಿ ಎತ್ತುಗಳನ್ನು ಸಾಕುವುದು ಕಡಿಮೆಯಾಗುತ್ತಿದೆ ಜಾನುವಾರುಗಳ ಮೇಲಿನ ಪ್ರೀತಿ ರೈತರಿಗೆ ಹೆಚ್ಚಾಗಬೇಕೆಂದರೆ ಇಂತಹ ಸ್ಪರ್ಧೆಗಳು ನಡೆದು ಅವರ ಎತ್ತುಗಳು ಬಹುಮಾನ ಗೆಲ್ಲಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳನ್ನು ರೈತರು ತಮ್ಮ ಮಕ್ಕಳಂತೆ ಪಾಲನೆ ಮತ್ತು ಪೋಷಣೆ ಮಾಡಿ ಅಖಾಡಕ್ಕೆ ಇಳಿಸುತ್ತಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಎತ್ತುಗಳಿಗೆ ಅಗತ್ಯವಿರುವ ತರಬೇತಿಯನ್ನು ನೀಡಿ. ಹೀಗಿರುವಾಗ ರೈತ ಹಾಗೂ ಎತ್ತುಗಳ ಮನೋರಂಜನೆಯಾತ್ಮಕ ಹಾಗೂ ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಡಾ. ಎ ಆರ್ ಬೆಳಗಲಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಕಮೀಟಿ ವತಿಯಿಂದ 50 ನೇ ವರ್ಷದ ಸುವರ್ಣಮಹೋತ್ಸವದ ಅಂಗವಾಗಿ ಅಂತರ ರಾಜ್ಯ ಮಟ್ಟದ ತೆರಬಂಡಿ ಸ್ಪರ್ಧೆಯ ಅಮೋಘ ಪ್ರಾರಂಭೋತ್ಸವ ಮತ್ತು ಅಭೂತಪೂರ್ವ ಚಾಲನೆ ಕಾರ್ಯಕ್ರಮದ ನಡೆಯಿತು.

ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಮಹಾರಾಜ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು. ಸಿದ್ಧ ಸಂಸ್ಥಾನ ಮಠ ಮಹಾಲಿಂಗಪುರ. ಉದ್ಘಾಟನೆ ಮಹಾಲಿಂಗಪುರದ ಖ್ಯಾತ ವೈದ್ಯರು ಹಾಗೂ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ. ಎ ಆರ್ ಬೆಳಗಲಿ. ಬಸವೇಶ್ವರ ಜಾತ್ರಾ ಕಮಿಟಿಯ ಅಧ್ಯಕ್ಷರು ಯಲ್ಲನಗೌಡ ಪಾಟೀಲ.ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ. ಮಹಾಲಿಂಗಪುರ ಪುರಸಭೆ ಅಧ್ಯಕ್ಷರು ಬಸವರಾಜ ಹಿಟ್ಟಿನ ಮಠ. ಬಾಗಲಕೋಟೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಮಹಾಂತೇಶ ಹಿಟ್ಟಿನಮಠ. ಕಾಂಗ್ರೆಸ್ ಮುಖಂಡ ಪರಶುರಾಮ ಬಿ ಬೆಳಗಲಿ. ಬಾಗಲಕೋಟೆ ಬಿ.ಡಿ.ಸಿ.ಸಿ ಬ್ಯಾಂಕ ನಿರ್ದೇಶಕರಾದ

ಬಸನಗೌಡ ಪಾಟೀಲ. ಮಹಾಲಿಂಗಪುರದ ಖ್ಯಾತ ವೈದ್ಯರಾದ ಡಾ ಸಂದೀಪ್ ಕನಕರಡ್ಡಿ. ಪ್ರಕಾಶ ಮಮದಾಪೂರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *

You may have missed