ಶೂ ಲೇಸ್’ನಲ್ಲಿ ನೇಣು ಬಿಗಿದುಕೊಂಡ ರೌಡಿಶೀಟರ್

0

ಬೆಂಗಳೂರು: ಜೈಲಿನ ಶೌಚಾಲಯದಲ್ಲಿ ಶೂ ಲೇಸ್​ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್(Rowdy Sheeter) ಸಾವನ್ನಪ್ಪಿರುವ ಘಟನೆ ನಡೆದಿದೆ. ಸುನೀಲ್ ಮೃತ ರೌಡಿ ಶೀಟರ್. ಇತನ ಸಾವು ಇದೀಗ ಹಲವಾರು ಮೂಡಿಸಿದೆ. ಹೌದು ಶೂ ಲೇಸ್​ನಿಂದ ನೇಣು ಬಿಗಿದುಕೊಂಡು ಸಾವನಪ್ಪಿದ ರೀತಿಯಲ್ಲಿ ಆತನ ಶವ ಪತ್ತೆಯಾಗಿದೆ.

ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದ ಆತ. ಇನ್ನು ಹತ್ತು ದಿನಗಳಲ್ಲಿ ಅಂದರೆ ಜೂನ್​.2 ಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಬೇಕಿದ್ದ. ಇನ್ನು ಈ ರೌಡಿಶೀಟರ್​ ಸುನೀಲ್​ ‘ಕಗ್ಗಲಿಪುರದಲ್ಲಿ ವಿನೋದ್ ಎಂಬಾತನನ್ನ ಕೊಲೆ ಮಾಡಿ ಜೈಲು ಸೇರಿದ್ದ.

ಹೌದು ಕೊಲೆ ಮಾಡಿ ಜೈಲು ಸೇರಿದ್ದ ಸುನೀಲ್​ ‘ಕೆಲ ದಿನಗಳ ಹಿಂದೆ ತನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಅಥವಾ ಬಾತ್ರೂಮ್​ನಲ್ಲಿ ನಾನೇ ನೇಣುಹಾಕಿಕೊಂಡ ರೀತಿ ನಿಮಗೆ ಸಿಗಬಹುದು ಎಂದು ಸಹ ಹೆಳಿಕೊಂಡಿದ್ದ. ಈ ಹಿಂದೆ ಕೊಲೆಯಾಗಿದ್ದ ವಿನೋದ್ ಮಾಜಿ ಕಾರ್ಪೊರೇಟರ್ ಓರ್ವರ ಅಣ್ಣನ ಮಗನಾಗಿದ್ದ. ಇವೆಲ್ಲವನ್ನೂ ನೋಡುತ್ತಿದ್ದರೆ. ರೌಡಿಶೀಟರ್​ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಶುರು ಮಾಡಿದ್ದಾರೆ. ಆ ಬಳಿಕವೇ ಸಾವಿಗೆ ನಿಜವಾದ ಕಾರಣ ತಿಳಿದು ಬರಬೇಕಿದೆ.

About Author

Leave a Reply

Your email address will not be published. Required fields are marked *

You may have missed