ರಾಜಧಾನಿ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬಿಹಾರ ಮೂಲದ ಯುವತಿ..!

0

ಬೆಂಗಳೂರು: ಬಿಹಾರ ಮೂಲದ ಯುವತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರೀಮಾ ಕುಮಾರಿ ಮೃತಪಟ್ಟ ಯುವತಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು, ಹಾಸ್ಟೆಲ್ನ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸೋಮವಾರ ರಾತ್ರಿ ಯುವತಿ ಪದೇ ಪದೇ ಟೆರೇಸ್’ಗೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿಗಳು ನೋಡಿದ್ದಾರೆ. ಬಳಿಕ ಯುವತಿಯನ್ನು ರೂಮಿಗೆ ಕಳುಹಿಸಿದ್ದಾರೆ.

ಆದರೆ, ಮರು ದಿನ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆ ನಡೆದು ಎರಡು ದಿನ ಕಳೆದರೂ ಪ್ರಕರಣವನ್ನು ಕೈಗೆತ್ತಿಕೊಳ್ಳಲು ವಿಳಂಬ ಮಾಡಿದ ಪೀಣ್ಯ ಪೊಲೀಸರ ವಿರುದ್ಧ ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಆಕ್ರೋಶ ಹೊರಹಾಕಿದ್ದು, ಮಂಗಳವಾರ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿತು. ಈ ನಡುವೆ ಯುವತಿಯ ಕುಟುಂಬಸ್ಥರು ಗುರುವಾರ ಠಾಣೆಗೆ ಬಂದಿದ್ದು, ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲಸ ಸ್ಥಳದಲ್ಲಿ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed