ಬೆಂಗಳೂರಿನಲ್ಲಿ ಫೇಕ್ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮರ ಬಂಧನ

0

ಬೆಂಗಳೂರು: ಬೆಂಗಳೂರಲ್ಲಿ ಫೇಕ್​ ಐಪಿಎಲ್‌ ಟಿಕೆಟ್ ಮಾರುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ. ದರ್ಶನ್, ಸುಲ್ತಾನ್ ಸೇರಿ ಮೂವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕ್ಯೂ ಆರ್ ಕೋಡ್ ಮಾಡುವ ಬಾರ್ ಕೋಡ್ ನಕಲಿ ಸೃಷ್ಟಿಸಿ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯ ವೇಳೆ‌ ನಕಲಿ ಟಿಕೆಟ್ ಜಾಲದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸೇರಿದಂತೆ ಇಬ್ಬರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ತಿಂಗಳು 17 ರಂದು ಆರ್ ಸಿಬಿ ಹಾಗೂ ಸಿಎಸ್ ಕೆ‌ ನಡುವೆ ಪಂದ್ಯ ನಿಗದಿಯಾಗಿತ್ತು. ಈ ಮ್ಯಾಚ್ ಟಿಕೆಟ್ ಬಾರಿ ಡಿಮ್ಯಾಂಡ್ ಕಂಡು ಬಂದಿತ್ತು‌.

ಇದನ್ನೇ ದುರ್ಬಳಕೆ‌ ಮಾಡಿಕೊಂಡ ದರ್ಶನ್, ತಮ್ಮ ಐಡಿ ಕಾರ್ಡ್​ನಲ್ಲಿದ್ದ ಬಾರ್ ಕೋಡ್ ತೆಗೆದು ನಕಲಿ ಬಾರ್​ ಕೋಡ್​ ಸೃಷ್ಟಿಸಿಕೊಂಡಿದ್ದ.‌ ನಂತರ ಸ್ನೇಹಿತರ ಮುಖಾಂತರ ನಕಲಿ ಟಿಕೆಟ್​ಗಳನ್ನು 10 ರಿಂದ 15 ಸಾವಿರ ರೂಪಾಯಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ‌ ಮಾಡುತ್ತಿದ್ದರು. ಸ್ಟೇಡಿಯಂ ಗೇಟ್ 6ರಲ್ಲಿ ಒಂದೇ ಬಾರ್ ಕೋಡ್​ನಿಂದ ಕ್ಯೂ ಆರ್ ಕೋಡ್ ಸೃಷ್ಟಿಸಿ ಅದನ್ನೇ ಸ್ಕ್ಯಾನ್​ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಅನುಮಾನಗೊಂಡ ಸುಮಂತ್ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಿದ್ದಾರೆ.‌ ಪರಿಶೀಲಿಸಿದಾಗ ದರ್ಶನ್ ಗೆ‌ ನೀಡಲಾಗಿದ್ದ ಬಾರ್ ಕೋಡ್ ನಿಂದಲೇ‌ ಹೆಚ್ಚು ಕ್ಯೂ ಆರ್ ಕೋಡ್ ಮಾಡಿರುವುದು ಕಂಡುಬಂದಿತ್ತು. ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed