ಸಿನಿಮೀಯಾ ರೀತಿಯಲ್ಲಿ ಬೈಕ್ ಗಳ ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್

0

ಬೆಂಗಳೂರು: ಸಿನಿಮೀಯಾ ರೀತಿಯಲ್ಲಿ ಮೊಬೈಲ್ ಮತ್ತು ಬೈಕ್ ಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುಬಾರಕ್, ಹಾಗೂ ಸುನೀಲ್ ಇಸ್ಮಾಯಿಲ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಖತರ್ನಾಕ್ ಆರೋಪಿಗಳು, ಬೈಕ್ ನಲ್ಲಿ ಕೆಳಗೆ ಬಿದ್ದಂತೆ ನಟಿಸುತ್ತಿದ್ದರು. ಕೂಡಲೇ ಸಹಾಯಕ್ಕೆ ಬಂದವರ ಮೊಬೈಲ್ ಅಥವಾ ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದರು.

ಇದೇ ರೀತಿ ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡೇಲಿವರಿ ಬಾಯ್ ನನ್ನು ದೋಚಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ೧೨ ಪ್ರಕರಣಗಳು ಸೇರಿದಂತೆ ೫ ಲಕ್ಷ ಬೆಲೆಬಾಳುವ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ಸಂಪಗಿಹಳ್ಳಿ ಠಾಣಾ ಸೇರಿ ಒಟ್ಟು ಎಂಟು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.

About Author

Leave a Reply

Your email address will not be published. Required fields are marked *

You may have missed