ಜನರ ಪಾಲಿಗೆ ಡೇಂಜರ್ ಆಗ್ತಿದ್ಯಾ ಮೆಟ್ರೋ ಕಾಮಾಗಾರಿ..!

0

ರಾಜಧಾನಿಯಲ್ಲಿ ಮೆಟ್ರೊ ಕಾಮಗಾರಿಗೆ ಸಂಬಂಧಿಸಿದ ನಿರ್ಲಕ್ಷ್ಯದಿಂದ ದುರಂತವೇ ಆಗಿಹೋಗಿದೆ. ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ರಾಡುಗಳೇ ಕುಸಿದು ಬಿದ್ದಿವೆ. ಮೆಟ್ರೋ ಪಿಲ್ಲರ್ ಕುಸಿದು ಸಂಭವಿಸಿದ ಈ ದುರ್ಘಟನೆಗೆ ಶೇ.40 ಕಮಿಷನ್ ಪರಿಣಾಮದ ಕಳಪೆ ಕಾಮಗಾರಿಯೇ ಕಾರಣ ಎಂಬ ಅಂಶ ಕೇಳಿಬರುತ್ತಿದೆ. ಟನ್‌ಗಟ್ಟಲೆ ತೂಕದ ಮೆಟ್ರೋ ಪಿಲ್ಲರ್‌ ದಿಢೀರ್‌ ಮರದ ಮೇಲೆ ಉರುಳಿ, ಆ ಮರದ ಕೊಂಬೆ ಅದೇ ಹೊತ್ತಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಕ್ಕಳ ಮೇಲೆ ಬಿದ್ದಿದೆ.

ಗಂಭೀರ ಗಾಯಗೊಂಡ ತಾಯಿ-ಮಗು ದುರ್ಮರಣ ಹೊಂದಿ, ತಂದೆ – ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿಲ್ಲರ್ 218ರಲ್ಲಿ ಸ್ಟೇಜಿಂಗ್ ಮತ್ತು ಗೈವೈರ್ ಬೆಂಬಲದೊಂದಿಗೆ ಪಿಲ್ಲರ್ ನಿರ್ಮಾಣ ಹಾಗೂ ಬಲವರ್ಧನೆ ಕಾರ್ಯ ನಡೆಯುತ್ತಿತ್ತು. ಆದರೆ, 18 ಮೀಟರ್ ಎತ್ತರದ ಪಿಲ್ಲರ್​ನ ಗೈವೈರ್‌ಗಳ ಪೈಕಿ ಒಂದು ತಂತಿ ಸಡಿಲಗೊಂಡು ತುಂಡಾಗಿದೆ. ಇದರಿಂದಾಗಿ ಪಿಲ್ಲರ್‌ ಕೆ.ಆರ್.ಪುರಂ ಹೆಬ್ಬಾಳ ಮುಖ್ಯರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಾವುನೋವು ಸಂಭವಿಸಿದೆ.

ಮೆಟ್ರೋ ಪಿಲ್ಲರ್​​​ ಕುಸಿತಕ್ಕೆ ಇಬ್ಬರ ಬಲಿ ಪ್ರಕರಣದ ಬಗ್ಗೆ BMRCL NCC ಕಂಪನಿಗೆ ನೋಟಿಸ್ ನೀಡಿ, ವರದಿ ಕೇಳಿದೆ. BMRCL ಎಂ.ಡಿ ಎಂಜಿ ಅಂಜುಂ ಪರ್ವೇಜ್​​​ ಮೂವರು ಮೆಟ್ರೋ ಎಂಜಿನಿಯರ್​ಗಳ ವಜಾ ಮಾಡಿ ಆದೇಶ ಹೊರಡಿಸಿದ್ಧಾರೆ. ದುರಂತ ಸ್ಥಳದ ಜವಾಬ್ದಾರಿ ಹೊತ್ತಿದ್ದ ಡೆಪ್ಯೂಟಿ ಚೀಫ್​​ ಎಂಜಿನಿಯರ್​​, ಕಾಂಟ್ರಾಕ್ಟ್​ ಮೇಲೆ ಕೆಲಸ ಮಾಡುತ್ತಿದ್ದ DCE, ಎಕ್ಸಿಕ್ಯುಟಿವ್ ಎಂಜಿನಿಯರ್​, ಸೆಕ್ಷನ್​​ ಎಂಜಿನಿಯರ್​ ವಜಾ ಗೊಳಿಸಲಾಗಿದೆ.

ಬಿಎಂಆರ್​ಸಿಎಲ್​​​​​ ಎಂಡಿ ಅಂಜುಂ ಪರ್ವೇಜ್​​​​ ಮಾತನಾಡಿ IISc ಮೂಲಕ ದುರಂತದ ಬಗ್ಗೆ ತನಿಗೆ ಮನವಿ ಮಾಡಿದ್ದೇವೆ. IISc ಇಂದು ಸಂಜೆಯಿಂದ ತನಿಖೆ ಮಾಡಲಿದೆ. BMRCL ಆಂತರಿಕ ತನಿಖೆ, ರೈಟ್ಸ್​ ಸಂಸ್ಥೆಯಿಂದ ತನಿಖೆ ನಡೆಸಲಾಗುತ್ತದೆ. ಮೂರು ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ತೇವೆ. 12 ಅಡಿ ಅಂತರದ ಪಿಲ್ಲರ್​ಗಳ ಕಾಮಗಾರಿ ಸ್ಥಗಿತವಾಗಿದೆ. ತಜ್ಞರ ಸಲಹೆ ಪಡೆದ ನಂತರ ಕೆಲ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed