ಇಂದಿನಿಂದ 3 ದಿನ ವಿಧಾನಸಭೆ ಅಧಿವೇಶನ.!

0

ಬೆಂಗಳೂರು: 16ನೇ ವಿಧಾನಸಭೆಯ (Vidhan Sabha) ಮೊದಲ ಅಧಿವೇಶನ (Session) ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. 16ನೇ ವಿಧಾನಸಭೆ ರಚನೆ ಹಾಗೂ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಉದ್ದೇಶದಿಂದ ಮೂರು ದಿನ ವಿಧಾನಸಭೆ ಅಧಿವೇಶನ ನಡೆಸಲಾಗುತ್ತಿದೆ.

 

ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಲು ಹಂಗಾಮಿ ಸ್ಪೀಕರ್ ಆಗಿ ಸದನದಲ್ಲಿ ಅತ್ಯಂತ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ (RV Deshpande) ಅವರನ್ನು ನೇಮಿಸಲು ನಿರ್ಧರಿಸಲಾಗಿದೆ. ಇದೇ ಅಧಿವೇಶನದಲ್ಲಿ ಸದನದ ನೂತನ ಸಭಾಧ್ಯಕ್ಷರ ಆಯ್ಕೆಯಾಗು ವವರೆಗೆ ವಿಧಾನ ಸಭಾಧ್ಯಕ್ಷರ ಕರ್ತವ್ಯವನ್ನು ಆರ್.ವಿ ದೇಶಪಾಂಡೆ ನಿರ್ವಹಿಸಲಿದ್ದಾರೆ.

ಹಂಗಾಮಿ ಸಭಾಧ್ಯಕ್ಷರು ಚುನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ 224 ಮಂದಿ ಶಾಸಕರು ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಲಿದ್ದಾರೆ. 15ನೇ ವಿಧಾನಸಭೆ ಅವಧಿ ಮೇ 23ಕ್ಕೆ ಅಂತ್ಯಗೊಳ್ಳಲ್ಲಿದ್ದು, ಅಷ್ಟರೊಳಗೆ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಪೂರ್ಣಗೊಳ್ಳಬೇಕಿದೆ.

About Author

Leave a Reply

Your email address will not be published. Required fields are marked *

You may have missed