ಬಜಾಜ್ ಫೈನಾನ್ಸ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚನೆ: ಆರೋಪಿ ಅರೆಸ್ಟ್

0

ಬೆಂಗಳೂರು: ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಂಗಳೂರಿನ ಕೇಂದ್ರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬಜಾಜ್ ಪೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ವಿಕಾಸ್, ಗ್ರಾಹಕರಿಗೆ ವಂಚನೆ ಎಸಗಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ.

ಅದರಂತೆ ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈತ, ಅಂತಹ ಗ್ರಾಹಕರ ದಾಖಲೆ ನೀಡಿ ಹೊಸ ಸಿಮ್ ಖರೀದಿ ಮಾಡಿಕೊಳ್ಳುತ್ತಿದ್ದನು. ಬಳಿಕ ಅದೇ ಸಿಮ್ ಕಾರ್ಡ್ ಬಳಸಿ ಬಜಾಜ್ ಕಾರ್ಡ್ ಖರೀದಿ ಮಾಡುತ್ತಿದ್ದನು.

ಗ್ರಾಹಕರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಬಜಾಜ್ ಕಂಪನಿಯ ಕಾರ್ಡ್ ಖರೀದಿಸಿದ ನಂತರ ಅಂತಹ ಕಾರ್ಡ್ ಮೂಲಕ ಅಮೇಜಾನ್​ನಲ್ಲಿ ಬೆಲೆಬಾಳುವ ಮೊಬೈಲ್ ಖರೀದಿ ಮಾಡುತ್ತಿದ್ದನು. ಹೀಗೆ ಖರೀದಿಸಿದ ಮೊಬೈಲ್​ಗಳನ್ನು ಓಎಲ್​ಎಕ್ಸ್​​ನಲ್ಲಿ ಮಾರಾಟ ಮಾಡುತ್ತಿದ್ದನು. ಇದೇ ರೀತಿ ಮೊಬೈಲ್​ಗಳನ್ನು ಮಾರಾಟ ಮಾಡಿದ ಆರೋಪಿ ವಿಕಾಸ್, 14 ಲಕ್ಷ ಹಣ ಮಾಡಿಕೊಂಡಿದ್ದಾನೆ. ಸದ್ಯ ಗ್ರಾಹಕರಿಗೆ ಆಗುತ್ತಿದ್ದ ವಂಚನೆ ಬಗ್ಗೆ ಬಜಾಜ್ ಕಂಪನಿಯು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರು, ವಿಕಾಸ್​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed