ಇಂದಿನಿಂದ ನಾಲ್ಕು ದಿನ ಮದ್ಯ ಮಾರಾಟಕ್ಕೆ ಬ್ರೇಕ್!

0

ಬೆಂಗಳೂರು: ಜಿದ್ದಾಜಿದ್ದಿನ ಅಖಾಡ ಆಗಿರೋ ರಾಜ್ಯ ವಿಧಾನಸಭಾ ಚುನಾವಣೆ (Assembly Election 2023) ಬಹಿರಂಗ ಪ್ರಚಾರಕ್ಕೆ ಇಂದು (ಸೋಮವಾರ) ಅಂತ್ಯ. ಇಂದಿನಿಂದಲೇ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಜೊತೆಗೆ ಸಂಜೆ 6 ಗಂಟರೆವರೆಗೂ ಮತದಾನಕ್ಕೆ ಅವಕಾಶ ನೀಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಎರಡೇ ದಿನ ಬಾಕಿ ಇದೆ.

ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಮಂಗಳವಾರ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. ಮತದಾನ ನಡೆಯುವ 48 ಗಂಟೆ ಮುಂಚೆ ಯಾವುದೇ ರೋಡ್ ಶೋ, ತೆರೆದ ವಾಹನದಲ್ಲಿ ಪ್ರಚಾರ ಮಾಡುವಂತಿಲ್ಲ. ಸ್ಟಾರ್ ಪ್ರಚಾರಕರು ಮತ್ತು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಒಂದು ವೇಳೆ ಕಾಣಿಸಿಕೊಂಡರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ.

ಇಂದಿನಿಂದ `ಎಣ್ಣೆ’ ಸಿಗಲ್ಲ: ಇಂದಿನಿಂದ ಒಟ್ಟು ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಆಗಲಿದೆ. ಇಂದು ಸಂಜೆ 5 ಗಂಟೆಯಿಂದ ಮೇ 10 ರಂದು ಮಧ್ಯರಾತ್ರಿವರೆಗೂ ಮದ್ಯ ಮಾರಾಟ ಇರಲ್ಲ. ಮೇ 13 ಅಂದ್ರೆ ಮತ ಎಣಿಕೆ ದಿನವೂ ಎಣ್ಣೆ ಸಿಗಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ್ರೆ ಕಾನೂನು ಕ್ರಮ ಜರುಗಿಸಲಿದ್ದಾರೆ. ಒಟ್ಟಾರೆ ಜಿದ್ದಾಜಿದ್ದಿನ ಕಣವಾಗಿರೋ ರಾಜ್ಯದಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮದ್ಯ ಮಾರಾಟಯ ನಿಷೇಧ ಆಗಲಿದೆ. ಚುನಾವಣೆಯ ಅಂತಿಮ ಘಟ್ಟ ತಲುಪಿದ್ದು ಹೇಗೆ ನಡೆಯಲಿದೆಯೋ ಕಾದು ನೋಡಬೇಕಿದೆ.

About Author

Leave a Reply

Your email address will not be published. Required fields are marked *

You may have missed