ಇನ್ಮುಂದೆ ಬೆಂಗಳೂರಿನ ಹೋಟೆಲ್ ಗಳಲ್ಲಿ ಟೀ, ಕಾಫಿ ಸಿಗೋದು ಡೌಟ್..! ಯಾಕೆ ಗೊತ್ತಾ..?

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೋಟೆಲ್‌ ಗಳಿಗೂ ಹಾಲಿನ ಕೊರತೆ ಉಂಟಾಗಿರುವ ಮಾಹಿತಿ ತಿಳಿದು ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಹೋಟೆಲ್‌ಗಳಿಗೆ ಪ್ರತಿನಿತ್ಯ ಸುಮಾರು 4.5 ಲಕ್ಷ ಲೀಟರ್‌ ಹಾಲು ಮತ್ತು 3 ಲಕ್ಷ ಲೀಟರ್‌ ಮೊಸರು ಅಗತ್ಯವಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯವಿರುವಷ್ಟು ಹಾಲು ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ ಎಂದು ಹೋಟೆಲ್‌ ಮಾಲೀಕರು, ದೂರಿದ್ದಾರೆ. ಕೋವಿಡ್‌ ನಂತರ ಹೋಟೆಲ್‌ಗಳಲ್ಲಿ ಮತ್ತೆ ವಹಿವಾಟು ಹೆಚ್ಚಿದೆ. ಹೀಗಾಗಿ, ಹಾಲಿನ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆಯಷ್ಟು ಪೂರೈಕೆಯಾಗದಿದ್ದರೆ ಖಾಸಗಿ ಸಂಸ್ಥೆಗಳಿಂದ ಖರೀದಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ. ನಂದಿನಿ ಬ್ರ್ಯಾಂಡ್‌ ಗುಣಮಟ್ಟದ ಹಾಲು. ನಮ್ಮ ನಾಡಿನ ಹೆಮ್ಮೆ. ಖಾಸಗಿ ಸಂಸ್ಥೆಗಳ ಹಾಲು ಖರೀದಿಸಲು ನಮಗೂ ಇಷ್ಟ ಇಲ್ಲ. ಆದರೆ, ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಬೇರೆ ರಾಜ್ಯಗಳಿಗೆ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಬೇಕು. ಆಗ ಇಲ್ಲಿಯೂ ಹಾಲು ಲಭ್ಯವಾಗುತ್ತದೆ. ಹೋಟೆಲ್‌ ಉದ್ಯಮಕ್ಕೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed