ನಕಲಿ ಚಿನ್ನದ ಗಟ್ಟಿ ಕೊಟ್ಟು ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದ ಆರೋಪಿ ಅರೆಸ್ಟ್

0

ಬೆಂಗಳೂರು: ನಕಲಿ‌ ಚಿನ್ನದ ಗಟ್ಟಿ ಕೊಟ್ಟು ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು, ನಿಕಿತ್ ಮೂಲ್ಯ ಎಂಬುವರಿಗೆ ಸ್ಯಾಂಪಲ್ ಅಂತಾ ಒರಿಜಿನಲ್ ಗಟ್ಟಿ ತೋರಿಸಿ ಮಾರಾಟ ಮಾಡೋವಾಗ ನಕಲಿ ಗಟ್ಟಿ ಕೊಟ್ಟು ಹದಿಮೂರು ಲಕ್ಷ ಪಡೆದು ವಂಚಿಸಿ ಎಸ್ಕೆಫ್ ಆಗಿದ್ದ.

 

ನಂತರ ಚಿನ್ನದ ಗಟ್ಟಿ ನಕಲಿ ಅಂತಾ ಗೊತ್ತಾ ನಿಕಿತ್ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 8ಲಕ್ಷ ಹಣ ಒಂದು ಬೈಕ್, ಕೆಲ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

You may have missed