ಕುಡಿದ ಅಮಲಿನಲ್ಲಿ ಬಾರ್ ನಲ್ಲಿ ಕಿರುತೆರೆ ನಟನ ಕಿರಿಕ್

0

ಬೆಂಗಳೂರು: ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಘಳಿಸಿರುವ ನಟ ಪ್ರಜ್ವಲ್ ಬಾರ್​ನಲ್ಲಿ ಉಂಟಾದ ಕಿರಿಕ್ ನಿಂದಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಆರ್​ಆರ್​ ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಆಗಿದೆ.

‘ಅಮೃತವರ್ಷಿಣಿ’ ಹಾಗೂ ‘ಅಣ್ಣ ತಂಗಿ’ ಧಾರಾವಾಹಿ ಮೂಲಕ ಪ್ರಜ್ವಲ್ ಖ್ಯಾತಿ ಘಳಿಸಿದ್ದು, ಮೂರು ದಿನದ ಹಿಂದೆ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಚೇತನ್ ಎಂಬುವರ ಜೊತೆ ಪ್ರಜ್ವಲ್​ ಆರ್​ಆರ್ ನಗರದ ‘ಅಮೃತ ಬಾರ್ ಆಯಂಡ್ ರೆಸ್ಟೋರೆಂಟ್’ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

ಪ್ರಜ್ವಲ್ ತಮ್ಮ ಸ್ನೇಹಿತರ ಜೊತೆ ಅಮೃತ ಬಾರ್​ಗೆ ಹೋಗಿದ್ದರು. ಇದೇ ಬಾರ್​ಗೆ ಚೇತನ್ ಕೂಡ ತನ್ನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಪ್ರಜ್ವಲ್​ನ ಸ್ನೇಹಿತ ಮನು ಎಂಬುವವರನ್ನು ಚೇತನ್ ಕರೆದಿದ್ದಾರೆ. ಇದರಿಂದ ಅಲ್ಲಿಯೇ ಇದ್ದ ಪ್ರಜ್ವಲ್ ಅವರು ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ.

ಮರದ ಪೀಸ್​​​ನಿಂದ ಚೇತನ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದ ಆರೋಪವನ್ನು ಚೇತನ್ ನಟ ಪ್ರಜ್ವಲ್ ಮಾಡಿದ್ದಾರೆ. ಬಾರ್​ನಲ್ಲಿ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಈ ಗುಂಪು ಮತ್ತೆ ಗಲಾಟೆ ಮಾಡಿಕೊಂಡಿದೆ. ಅಮೃತ ಬಾರ್​​ನಲ್ಲಿ ಗಲಾಟೆ ಆದ ಬಳಿಕ ಚೇತನ್ ಸ್ನೇಹಿತರ ಮೇಲೆ ಪ್ರಜ್ವಲ್ ಮತ್ತೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ದೂರು ದಾಖಲಾಗಿದೆ. ಸದ್ಯ ಚೇತನ್ ಕೊಟ್ಟು ದೂರಿನನ್ವಯ ಎಫ್​ಐಆರ್​ ದಾಖಲು ಮಾಡಿಕೊಂಡು ಪೊಲೀಸರು‌ ನೊಟೀಸ್ ನೀಡಿದ್ದಾರೆ. ಇದರ ಜೊತೆಗೆ ಬಾರ್​​ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed