ಐದು ವರ್ಷ ಲೈಂಗಿಕ ಸಂಪರ್ಕ ಆರೋಪ: ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

0

ಬೆಂಗಳೂರು: ಮದುವೆ ಭರವಸೆ ನೀಡಿ ಐದು ವರ್ಷಗಳ ಕಾಲ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ಮದುವೆ ನಿರಾಕರಿಸಿದ ವ್ಯಕ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಬೆಂಗಳೂರಿನ ಹೈಕೋರ್ಟ್ ರದ್ದುಪಡಿಸಿದೆ. ಈ ಸಂಬಂಧ ತನ್ನ ವಿರುದ್ಧ ಯುವತಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

 

ಪ್ರಸ್ತುತ ಪ್ರಕರಣದಲ್ಲಿ ಒಂದೆರಡು ಅಲ್ಲ ಹಲವು ವರ್ಷಗಳಿಂದ ದೂರುದಾರ ಸಂತ್ರಸ್ತೆ ಮತ್ತು ಆರೋಪಿತರು ಪ್ರೀತಿಸುತ್ತಿದ್ದರು ಎಂದು ವಿವರಿಸಲಾಗಿದೆ. ಹೀಗಾಗಿ ಐದು ವರ್ಷಗಳ ಕಾಲ ಜೊತೆಗಿರುವಾಗ ಸಂತ್ರಸ್ತೆಯ ವಿರುದ್ಧವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂಬ ಅಂಶವನ್ನು ಒಪ್ಪಲಾಗುವುದಿಲ್ಲ. ಹೀಗಾಗಿ ಪ್ರಕರಣ ಮುಂದುವರಿದಲ್ಲಿ ಕಾನೂನಿನ ದುರುಪಯೋಗವಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

About Author

Leave a Reply

Your email address will not be published. Required fields are marked *

You may have missed