ಬೆಂಗಳೂರಿನಲ್ಲಿ ಮತ್ತೆ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್..!

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಬಾಡಿಗೆ ಮನೆ ಅಪಾರ್ಟ್ಮೆಂಟ್ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಟೆಕ್ಕಿಗಳಿಗೆ ವರ್ಕ್ ಫ್ರಮ್ ಹೋಂ ಮುಗಿಯುತ್ತಿದ್ದಂತೆ ಬಾಡಿಗೆ ರೇಟ್ ದಿಢೀರ್ ಏರಿಕೆಯಾಗಿದೆ. ಆದರೆ ಗಗನಕ್ಕೇರಿದ ಮನೆ ಬಾಡಿಗೆಯಿಂದ ಟೆಕ್ಕಿಗಳಿಗೆ ಸಂಕಷ್ಟ ಎದುರಾಗಿದ್ದು, ದುಬಾರಿ ಬಾಡಿಗೆಗೆ ಫುಲ್ ಸುಸ್ತಾಗಿದ್ದಾರೆ.

ಕೋವಿಡ್ ವೇಳೆ ಸ್ವಂತ ಊರುಗಳತ್ತ ಮುಖ ಮಾಡಿದ್ದ ಟೆಕ್ಕಿಗಳು,

ವರ್ಕ್ ಫ್ರಂ ಹೋಮ್ ಮೂಲಕವೇ ಕೆಲಸ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಬಹುತೇಕ ಐಟಿ ಕಂಪನಿಗಳು ಇದೀಗ ಆಫ್ ಲೈನ್ ಕೆಲಸವನ್ನು ಶುರು ಮಾಡಿಕೊಂಡಿವೆ. ಹೀಗಾಗಿ ಬಹುತೇಕ ಉದ್ಯೋಗಿಗಳು ವಿವಿಧ ರಾಜ್ಯಗಳಿಂದ ನಗರಕ್ಕೆ ಮರಳಿದ್ದಾರೆ. ಆದರೆ 2021ಕ್ಕೆ ಹೋಲಿಸಿದರೆ 2023ರಲ್ಲಿ ಸರಾಸರಿ ಬಾಡಿಗೆ ಶೇ. 15 ರಿಂದ 20 ರಷ್ಟು ಹೆಚ್ಚಳವಾಗಿದೆ. ಟೆಕ್ ಕಾರಿಡಾರ್ ಹಾಗೂ ಐಟಿ ಪಾರ್ಕ್ ಸುತ್ತಮುತ್ತ ದುಬಾರಿ ಬಾಡಿಗೆ ಕೊಡುವ ಬದಲು, ಹೊಸ ಅಪಾರ್ಟ್ಮೆಂಟ್ ಖರೀದಿಯೇ ಬೆಸ್ಟ್ ಎಂದು ಟೆಕ್ಕಿಗಳು ಹೇಳುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed