ಗಡಿ ವಿಚಾರದಲ್ಲಿ ಸರ್ಕಾರ ಸತ್ತು ಹೋಗಿದೆಯಾ? ನಮ್ಮನ್ನು ಪದೇ ಪದೇ ಕೆಣಕಬೇಡಿ: ಸಿದ್ದರಾಮಯ್ಯ ಆಕ್ರೋಶ

0

ಹುಬ್ಬಳ್ಳಿ: ಗಡಿ ವಿಚಾರದಲ್ಲಿ ಸರ್ಕಾರ ಸತ್ತು ಹೋಗಿದೆಯಾ? ನಮ್ಮ ರಾಜ್ಯದಲ್ಲಿರೋ ಹಳ್ಳಿಗಳಿಗೆ ಬಂದು ಹೆಲ್ತ್ ಸ್ಕೀಂ ಮಾಡ್ತಾರೆ ಅಂದರೆ ಏನರ್ಥ. ಇದು ನಮ್ಮ ಸಾರ್ವಭೌಮತೆಗೆ ಸವಾಲು. ನಮ್ಮನ್ನು ಪದೇ ಪದೇ ಕೆಣಕಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶರಾಜ್ಯದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಒಂದಿಂಚೂ ನೆಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು.

ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. 1966ರಲ್ಲಿ ವರದಿ ಸಲ್ಲಿಕೆಯಾಗಿದೆ. ಅಂದಿನಿಂದ ನಾವೂ ಒಪ್ಪಿಕೊಂಡಿದ್ದೇವೆ. ಅದ್ರೆ ಅವರು ತಕರಾರು ಮಾಡುತ್ತಲೆ ಇದಾರೆ. ಮಹಾಜನ್ ಮಹಾರಾಷ್ಟ್ರದವರೇ ಆಗಿದ್ದಾರೆ ಎಂದರು.

ಈಗ 865 ಹಳ್ಳಿಗಳನ್ನು ಮಹಾರಾಷ್ಟ್ರ ಕ್ಕೆ ಸೇರಿಸಬೇಕೆನ್ನುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು‌ ಸುಮ್ಮನಿವೆ. ಸರ್ಕಾರಗಳು ಸತ್ತು ಹೋಗಿವೆಯಾ? ನಮ್ಮ ರಾಜ್ಯದಲ್ಲಿರೋ ಹಳ್ಳಿಗಳಿಗೆ ಬಂದು ಹೆಲ್ತ್ ಸ್ಕೀಂ ಮಾಡ್ತಾರೆ ಅಂದರೆ ಏನರ್ಥ. ಇದು ನಮ್ಮ ಸಾರ್ವಭೌಮತೆಗೆ ಸವಾಲು. ರಾಜ್ಯದ ಒಂದಿಂಚೂ ನೆಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು. ಭಾಷೆ, ಸಂಸ್ಕೃತಿ, ನೆಲ-ಜಲ ಆರೂವರೆ ಕೋಟಿ ಜನರ ಹಕ್ಕು. ಅದಕ್ಕೆ ಧಕ್ಕೆ ಬಂದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರ ಸುಮ್ಮನೇ ಕುಳಿತಿವೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಕಿಡಿಕಾರಿದರು.

ಮಹಾರಾಷ್ಟ್ರದಲ್ಲಿಯೂ ಕನ್ನಡಿಗರಿದ್ದಾರೆ. ಅಲ್ಲಿನ ಜನ ಕರ್ನಾಟಕಕ್ಕೆ ಸೇರ್ತೇವೆ ಅಂದಿದ್ದಾರೆ. ಹಾಗಂತ ನಾವು ಅಲ್ಲಿ ಮಧ್ಯಪ್ರವೇಶ ಮಾಡೋಕೆ ಆಗುತ್ತಾ. ಸೌಲಭ್ಯ ಕೊಡ್ತೀವಿ ಅಂತ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕೂಡಲೇ ಮಧ್ಯಪ್ರವೇಶ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹೇಳಿಕೆ ಕೊಟ್ಟವರು ಏಕನಾಥ್ ಸಿಂಧೆ ಸರ್ಕಾರದ ಸೀನಿಯರ್ ಲೀಡರ್. ನಾವು ಪದೇ ಪದೇ ಶಾಂತವಾಗಿದ್ದೇವೆ ಅಂದ್ರೆ ಮೌನವಾಗಿದ್ದೇವೆ ಎಂದರ್ಥವಲ್ಲ. ಪದೇ ಪದೇ ಕೆಣಕಲು ಬರಬೇಡಿ. ಕೂಡಲೆ ಕೇಂದ್ರ ಸರ್ಕಾರ ಏಕನಾಥ್ ಸಿಂಧೆ ಸರ್ಕಾರ ಕಿತ್ತೊಗೆಯಬೇಕು. ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಸಿಎಂ ಬೊಮ್ಮಾಯಿ ವಿಫಲರಾಗಿದ್ದು, ಸಿಎಂ ಆಗಿ ಮುಂದುವರೆಯೋಕೆ ಅಸಮರ್ಥರು. ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.

ಇನ್ನು, ಇಂದಿರಾ ಕ್ಯಾಂಟೀನ್‌ಗೆ ಇಂದಿರಾ ಗಾಂಧಿಯವರು ಹೆಸರು ಇಟ್ಟಿದ್ದೇವೆ. ಇದರ ಉದ್ದೇಶ ಬಡವರಿಗೆ ಕಡಿಮೆ ಹಣದಲ್ಲಿ ಊಟ ಸಿಗಬೇಕು ಎಂಬುದು. ಇಂದಿರಾ ಕ್ಯಾಂಟೀನ್‌ಗಾಗಿ 1100 ಕೋಟಿ ರೂಪಾಯಿ ಹಣವನ್ನ ಬಜೆಟ್‌ನಲ್ಲಿ ಇಟ್ಟಿದ್ದೆ. ಈಗ ಇವರು ಅದನ್ನ ಮುಚ್ಚಲ್ಲಿಕ್ಕೆ ಹೊರಟಿದ್ದಾರೆ‌. ಇಂದಿರಾ ಕ್ಯಾಂಟೀನ್ ಮುಚ್ಚಿದ್ರೆ ಬಡವರಿಗೆ ದ್ರೋಹ ಮಾಡಿದಂತೆ. ತಮ್ಮ ಪ್ರಣಾಳಿಕೆಯಲ್ಲಿ 300 ಇಂದಿರಾ ಕ್ಯಾಂಟೀನ್ ಓಪನ್ ಮಾಡುತ್ತೆವೆಂದು ಹಾಕಿದ್ದರು. ಈಗ ಹೊಸದಾಗಿ ತೆಗೆಯುವುದು ಬೇಡ, ಹಳೆಯದನ್ನ ಮುಚ್ಚುತ್ತಿದ್ದಾರೆ. ಇದನ್ನ ಬಹಳ ಜನ ಸ್ವಾಗತ ಮಾಡಿದ್ದರು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರಿನಲ್ಲಿ ಇದೆ ಎನ್ನುವುದಕ್ಕೆ ಮುಚ್ಚುವುದು ಬೇಡ ಎಂದರು.

About Author

Leave a Reply

Your email address will not be published. Required fields are marked *

You may have missed