ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೊನೆಗೂ ಮುಂಗಾರು ಮಳೆ ಪ್ರವೇಶ

0

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೊನೆಗೂ ಮುಂಗಾರು ಮಳೆ ಪ್ರವೇಶವಾಗಿದೆ. ಸೋಮವಾರ ಸಂಜೆ 6 ಗಂಟೆ ವೇಳೆಯಲ್ಲಿ ಚಾಮರಾಜನಗರ  ಜಿಲ್ಲೆಗ ಪ್ರವೇಶ ಪಡೆಯಿತು.ಪ್ರತೀ ವರ್ಷ ಮೇ ಹಾಗೂ ಜೂನ್ತಿಂಗಳಲ್ಲಿ ಮುಂಗಾರು ಮಳೆಯು ಜಿಲ್ಲೆಗೆ ಪ್ರವೇಶಿಸುವುದು ವಾಡಿಕೆಯಾಗಿದೆ.

ಆದರೆ ಈ ಬಾರಿ ಮುಂಗಾರುಮಳೆ ಬಾರದೆ ರೈತರು ತಲೆ ಮೇಲೆ ಕೈಕೊಟ್ಟು ಬೆಳೆಹಾನಿ ಭೀತಿಯಲ್ಲಿ ಕಂಗಾಲಾಗಿದ್ರು.

ರೈತರು ಹಿಂಗಾರುಮಳೆಯನ್ನೇ ಆಶ್ರಯಿಸಿ ದ್ವಿದಳ ದಾನ್ಯಗಳಾದ ಉದ್ದು , ಅಲಸಂದೆ, ಹೆಸರು, ಮುಸುಕಿನಜೋಳ, ರಾಗಿ ಸೇರಿದಂತೆ ಮಳೆಯಾಶ್ರಿತ ಬೆಳೆಗಳನ್ನು ಬೆಳೆದಿದ್ರು. ಆದರೆ ಸಕಾಲದಲ್ಲಿ ಮುಂಗಾರುಮಳೆ ಬಾರದೆ ಬೆಳೆದು ನಿಂತ ಫಸಲು ಹಾಳಾಗುವ ಭೀತಿ ಯಲ್ಲಿದ್ರು, ಆದರೆ ಸೋಮವಾರ ಮದ್ಯಾಹ್ನದ ನಂತರ ಮೋಡ ಮುಸುಕಿದ ವಾತಾವರಣ ಸೃಷ್ಡಿಯಾಗಿ ಸುಮಾರು ಸಂಜೆ 6 ಗಂಟೆ ವೇಳೆಯಲ್ಲಿ ಮುಂಗಾರು ಮಳೆಯು ಜಿಲ್ಲೆಗೆ ಆಗಮಿಸಿದೆ. ಪರಿಣಾಮವಾಗಿ ಮಳೆಗಾಗಿ ಕಾದಿದ್ದ ರೈತರು ಕೊಂಚ ಸಂತಸಪಡುವಂತಾಗಿದೆ.

About Author

Leave a Reply

Your email address will not be published. Required fields are marked *

You may have missed