ಡ್ರಿಂಕ್ ಅಂಡ್ ಡ್ರೈವ್ ತಪ್ಪಿಸಲು ಸಂಚಾರಿ ಪೊಲೀಸರ ಹೊಸ ಪ್ಲಾನ್.!

0

ರಾಜಧಾನಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆಯೇ ವಿನಹ ಕಡಿಮೆ ಅಂತೂ ಆಗುತ್ತಿಲ್ಲ. ಇದೀಗ ನಗರ ಸಂಚಾರಿ ಪೊಲೀಸರು, ನೂತನ ಕ್ರಮ ಕೈಗೊಂಡಿದ್ದಾರೆ. ಡ್ರಿಂಕ್ ಆಯಂಡ್ ಡ್ರೈವ್ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ ಜಾಗೃತಿ ಮೂಡಿಸಲು ಬೆಂಗಳೂರು ಸಂಚಾರ ಪೊಲೀಸರು ವಿನೂತನ ಅಭಿಯಾನ ಹಮ್ಮಿಕೊಂಡಿದ್ದು, ಫೈನ್ ಹಾಕುವ ಮೊದಲು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.

 

ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಪ್ಪಿಸಲು ಸಂಚಾರಿ ಪೊಲೀಸರು ವಾಹನ ಸವಾರರಿಂದ ಸಹಿ ಪಡೆಯುವ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಈ ಸಹಿ ಪಡೆಯುವ ವೇಳೆ, ಕುಡಿದು ವಾಹನ ಚಲಾಯಿಸುವುದರಿಂದ ಆಗುವ ಅವಘಡಗಳ ಬಗ್ಗೆ ಪೊಲೀಸರು ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಉಪ್ಪಾರಪೇಟೆ ಸಂಚಾರಿ ಪೊಲೀಸರು ಈ ವಿಶೇಷ ಅಭಿಯಾನ ನಡೆಸುತ್ತಿದ್ದು, ಮೈಸೂರು ಬ್ಯಾಂಕ್ ಸರ್ಕಲ್ ಬಳಿ, ವಾಹನ ಸವಾರರಿಂದ ಸಹಿ ಪಡೆಯುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed