ಯಡಿಯೂರಪ್ಪ ಎಷ್ಟೇ ಬೈದರು, ಟೀಕಿಸಿದರೂ ಆಶೀರ್ವಚನ ಎಂದು ಭಾವಿಸುತ್ತೇನೆ: ಶೆಟ್ಟರ್

0

ಹುಬ್ಬಳ್ಳಿ: ಯಡಿಯೂರಪ್ಪ (BS Yediyurappa) ನನ್ನ ಟಿಕೆಟ್ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಅಸಹಾಯಕರಾದರು. ಈಗ ನನ್ನ ಮೇಲೆ ಯಡಿಯೂರಪ್ಪ ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ.

ಯಡಿಯೂರಪ್ಪ ಎಂಬ ಹಿರಿಯ ಮತ್ತು ಲಿಂಗಾಯತ ನಾಯಕರಿಂದ ನನ್ನ ಬೈಯಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಆರೋಪ ಮಾಡಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಇದೇ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಬಸವರಾಜ ಬೊಮ್ಮಾಯಿ ಹೋಗಲಿಲ್ಲ ಅಂತ ಹಿಗ್ಗಾಮುಗ್ಗಾ ಬೈದಿದ್ದರು. ಆದರೆ ಬಸವರಾಜ ಬೊಮ್ಮಾಯಿಯವರು ಬಿಜೆಪಿಯಲ್ಲಿ (BJP) ಗೆಲುವು ಸಾಧಿಸಿದ್ದರು. ನಾನು ಕೂಡಾ ಅತಿ ಹೆಚ್ಚು ಲೀಡ್‌ನಿಂದ ಗೆಲುವು ಸಾಧಿಸುತ್ತೇನೆ. ಯಡಿಯೂರಪ್ಪ ಎಷ್ಟೇ ಬೈದರು ಅದು ಅವರ ಆಶೀರ್ವವಚನ ಎಂದು ಭಾವಿಸುತ್ತೆನೆ ಎಂದು ಹೇಳಿದರು.

ಒಬ್ಬ ಲಿಂಗಾಯತ ನಾಯಕನಿಂದ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೈಯಿಸಲಾಗುತ್ತಿದೆ. ಯಡಿಯೂರಪ್ಪನವರು ಅಸಹಾಯಕರಾಗಿದ್ದಾರೆ. ಯಡಿಯೂರಪ್ಪನವರು ರಕ್ತದಲ್ಲಿ ಬರೆದು ಕೊಡಲಿ ಅಥವಾ ಯಾವುದರಿಂದಾದಲೂ ಬರೆದು ಕೊಡಲಿ. ನೇರವಾಗಿ ಯುದ್ಧಕ್ಕೆ ಬರೋರು ನೀವೇ ಬನ್ನಿ, ಯಡಿಯೂರಪ್ಪರನ್ನು ಯಾಕೆ ನಡುವೆ ತರುತ್ತಿರಿ? 50-60 ಜನ ಲಿಂಗಾಯತರ ಜೊತೆಗೆ ಸೇರಿ ಸಭೆ ಮಾಡಿದರೆ ಇಡೀ ಲಿಂಗಾಯತ ಸಮುದಾಯದ ಸಭೆ ಆಗಲ್ಲ ಎಂದರು.

About Author

Leave a Reply

Your email address will not be published. Required fields are marked *

You may have missed