ಇನ್​​ಸ್ಟಾಗ್ರಾಮ್ ಮೂಲಕ ಯುವತಿಯರ ನಗ್ನ ಚಿತ್ರ ಪಡೆದು ಬ್ಲ್ಯಾಕ್​ಮೇಲ್: ಆರೋಪಿ ಅರೆಸ್ಟ್

0

ಬೆಂಗಳೂರು: ಇನ್​​ಸ್ಟಾಗ್ರಾಮ್(Instagram) ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳ ಪಡೆದು ಬ್ಲ್ಯಾಕ್​ಮೇಲ್(Black mail)​ ಮಾಡುತ್ತಿದ್ದ ಆರೋಪಿಯನ್ನು ಆಗ್ನೆಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ದಿಲ್ಲಿ ಪ್ರಸಾದ್ ಬಂಧಿತ ಆರೋಪಿ. ಆಂಧ್ರ ಮೂಲದ ಆರೋಪಿ ದಿಲ್ಲಿ ಪ್ರಸಾದ್​​ 2018 ರಿಂದ ಬೆಂಗಳೂರಿನಲ್ಲಿ ವಾಸವಿದ್ದನು. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದನು. ಈತ ಮೊನಿಯ ಮತ್ತು ಮ್ಯಾನೇಜರ್ ಎಂಬ ಎರಡು ನಕಲಿ ಖಾತೆ ಸೃಷ್ಟಿ ಮಾಡಿದ್ದಾನೆ. ಈ ಖಾತೆಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡಿದ್ದಾನೆ.

ನಂತರ ಯುವತಿಯರೊಂದಿಗೆ ಸಲುಗೆಯಿಂದ ವರ್ತಿಸಿ, ನಂಬಿಕಸ್ತ ಎಂದು ಭರವಸೆ ಮೂಡಿಸುತ್ತಿದ್ದನು. ಬಳಿಕ ಅವರಿಗೆ ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳನ್ನು ಪಡೆದು ಕೊಳ್ಳುತಿದ್ದನು. ಬಳಿಕ ಫೋಟೋಗಳನ್ನು ಬಳಸಿ ಬೆದರಿಸಿ ಬೇರೊಬ್ಬರ ಜೊತೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯ ಮಾಡುತ್ತಿದ್ದನು. ಈತ ಹೇಳಿದ ವ್ಯಕ್ತಿಗೆ ಭೇಟಿಯಾಗುವಂತೆ ಯುವತಿಯರಿಗೆ ಹೇಳುತ್ತಿದ್ದನು. ಇದರಂತೆ ಓರ್ವ ಯುವತಿ ಬ್ಯ್ಲಾಕ್​ಮೇಲ್​​ಗೆ ಒಳಗಾಗಿ ಮಡಿವಾಳದ ಓಯೋ ರೂಂನಲ್ಲಿ ಲೈಂಗಿಕ ಕ್ರಿಯೆ ವೇಳೆ ವಿಡಿಯೋ ದೃಶ್ಯವಳಿಗಳನ್ನು ಸೆರೆ ಹಿಡಿದುಕೊಂಡಿದ್ದನು. ವಿಷಯ ತಿಳಿಯುತ್ತಿದ್ದಂತೆ ಆಗ್ನೆಯ ವಿಭಾಗದ ಸಿಇಎನ್(cen) ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ವೇಳೆ ಮತ್ತಷ್ಟು ಕೃತ್ಯದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾನೆ.

About Author

Leave a Reply

Your email address will not be published. Required fields are marked *

You may have missed