ನಿಯಮ ಉಲ್ಲಂಘನೆ: 934 ಕೋಟಿ ರೂ. ದಂಡ ಬಾಕಿ ಉಳಿಸಿಕೊಂಡ ಸಂಚಾರಿ ಪೊಲೀಸರು

0

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ನಿತ್ಯ 1.9 ಕೋಟಿ ವಾಹನಗಳು ರಸ್ತೆಗಿಳಿಯುತ್ತಿದ್ದು, ಸಂಚಾರ ನಿರ್ವಹಣೆ ಮಾಡುವುದೇ(Traffic Rules) ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇದೆಲ್ಲದರ ನಡುವೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡುವಲ್ಲಿ ಸಂಚಾರ ಪೊಲೀಸ್‌ ವಿಭಾಗ ವಿಫ‌ಲವಾಗಿದ್ದು, ಇನ್ನೂ 934 ಕೋಟಿ ರೂ.

ದಂಡ ಸಂಗ್ರಹಿಸಲು ಬಾಕಿ ಉಳಿಸಿಕೊಂಡಿರುವುದು ಸಂಚಾರ ಪೊಲೀಸರ ವೈಫ‌ಲ್ಯತೆ ತೋರಿಸುತ್ತದೆ. ಇದನ್ನು ಮನಗಂಡ ನ್ಯಾಯಾಲಯವು ಇತ್ತೀಚೆಗೆ ಅರ್ಧ ದಂಡ ಪಾವತಿಗೆ ಅವಕಾಶ ಕೊಟ್ಟಿತ್ತು.

ಇಷ್ಟಾದರೂ ಬಹುತೇಕ ವಾಹನ ಸವಾರರು ದಂಡ ಕಟ್ಟಲು ಹಿಂದೇಟು ಹಾಕಿದ್ದಾರೆ. ಆ ಸಂದರ್ಭದಲ್ಲಿ ಒಟ್ಟಾರೆ ಸುಮಾರು 130 ಕೋಟಿ ರೂ. ದಂಡ ಸಂಗ್ರಹವಾಗಿದೆ. ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ನಗರದ ಹಲವು ರಸ್ತೆಗಳಲ್ಲಿ ವಾಹನ ಸವಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಬಾಕಿ ದಂಡ ಸಂಗ್ರಹ ಗಂಭೀರವಾಗಿ ಪರಿಗಣಿಸಿರುವ ಸಂಚಾರ ವಿಭಾಗದ ಪೊಲೀಸರು ದಂಡ ವಸೂಲಿಗೆ ಹೊಸ ಅಸ್ತ್ರ ಬಳಸಲು ಪೂರ್ವ ತಯಾರಿ ನಡೆಸಿದ್ದಾರೆ. ಈ ಕಾರ್ಯ ವಿಧಾನವನ್ನು ಕೆಲ ದಿನಗಳಲ್ಲೇ ಬಹಿರಂಗಪಡಿಸುವುದಾಗಿ ಸಂಚಾರ ವಿಭಾಗದ ವಿಶೇಷ ಪೊಲೀಸ್‌ ಆಯುಕ್ತ ಡಾ.ಎಂ.ಎ.ಸಲೀಂ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed