ಲೈಂಗಿಕ ಕಿರುಕುಳ ಪ್ರಕರಣ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷನಿಗೆ ಜಾಮೀನು

0

ವದೆಹಲಿ: ಉಚ್ಛಾಟಿತ ಅಸ್ಸಾಂ ಯುವ ಕಾಂಗ್ರೆಸ್ ಅಧ್ಯಕ್ಷೆ ಅಂಗಿತಾ ದತ್ತಾ ಅವರ ಲೈಂಗಿಕ ಕಿರುಕುಳದ ದೂರಿನ ಮೇಲೆ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ವಿಭಾಗೀಯ ಪೀಠವು ರಾಯಪುರದಲ್ಲಿ 2023ರ ಫೆಬ್ರವರಿ 24ರಂದು ಅಸ್ಸಾಂನಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳದ ಪ್ರಕರಣವನ್ನು ಗಮನಿಸಿದೆ.

ಅಲ್ಲದೆ ದೂರು ಸಲ್ಲಿಸುವ ಮೊದಲು ದೂರುದಾರರು ತಮ್ಮ ಟ್ವೀಟ್‌ಗಳಲ್ಲಿ ಮತ್ತು ಮಾಧ್ಯಮ ಸಂದರ್ಶನಗಳಲ್ಲಿ ಆರೋಪಿಸಿದ್ದನ್ನು ಗಮನಿಸಿದ್ದು ಇನ್ನು ಎಫ್‌ಐಆರ್ ದಾಖಲಿಸುವಲ್ಲಿ ಸುಮಾರು ಎರಡು ತಿಂಗಳ ವಿಳಂಬವನ್ನು ಪರಿಗಣಿಸಿ, ಅರ್ಜಿದಾರರು ಮಧ್ಯಂತರ ರಕ್ಷಣೆಗೆ ಅರ್ಹರಾಗಿರುತ್ತಾರೆ. ಬಂಧನದ ಸಂದರ್ಭದಲ್ಲಿ, ಅರ್ಜಿದಾರರನ್ನು ರೂ. 50,000/- ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ ಎಂದರು. ಮೇ 22ರಂದು ತನಿಖಾಧಿಕಾರಿಯ ಮುಂದೆ ಮತ್ತು ಅಧಿಕಾರಿಯ ನಿರ್ದೇಶನದಂತೆ ನಂತರದ ದಿನಾಂಕಗಳಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತನಿಖೆಗೆ ಸಹಕರಿಸುವಂತೆ ಪೀಠವು ಶ್ರೀನಿವಾಸ್ ಗೆ ತಿಳಿಸಿದೆ. ಈ ಪ್ರಕರಣ ಸಂಬಂಧ ಮುಂದಿನ 2023ರ ಜುಲೈನಲ್ಲಿ ವಿಚಾರಣೆ ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed