ರಶ್ಯಾದ 4 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್

0

ಮಾಸ್ಕೋ: ಉಕ್ರೇನ್ ನ ಗಡಿಭಾಗದ ಬಳಿ ರಶ್ಯಾದ 4 ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದ್ದು ಮತ್ತೊಂದು ಯುದ್ಧವಿಮಾನ ಪತನಗೊಂಡಿದೆ ಎಂದು ರಶ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್ ಮೇಲೆ ಆಕ್ರಮಣ ಎಸಗಲು ಕಳುಹಿಸಲಾಗಿದ್ದ 2 ಜೆಟ್ವಿಮಾನ, 2 ಮಿಲಿಟರಿ ಹೆಲಿಕಾಪ್ಟರ್ಗಳನ್ನು ಬ್ರಯಾಂಸ್ಕ್ ವಲಯದಲ್ಲಿ ಹೊಡೆದುರುಳಿಸಲಾಗಿದೆ.

 

ಎಸ್ಯು-34 ಬಾಂಬರ್ ಯುದ್ಧವಿಮಾನ, ಎಸ್ಯು-35 ಯುದ್ಧವಿಮಾನ ಹಾಗೂ 2 ಎಂಐ-8 ಹೆಲಿಕಾಪ್ಟರ್ಗಳು ಉಕ್ರೇನ್ನ ಚೆರ್ನಿಹಿವ್ ವಲಯದಲ್ಲಿನ ಗುರಿಗಳ ಮೇಲೆ ಕ್ಷಿಪಣಿ ಮತ್ತು ಬಾಂಬ್ ದಾಳಿ ನಡೆಸಲು ಸಿದ್ಧವಾಗಿದ್ದವು ಮತ್ತು ಇವುಗಳ ಬೆಂಗಾವಲಿಗೆ ಇದ್ದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯಾದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.

ಘಟನೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯ ಹಿರಿಯ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ‘ಇದು ನ್ಯಾಯ ಮತ್ತು ಕರ್ಮದ ಫಲ’ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

You may have missed