ಪ್ರಧಾನಿ ರೋಡ್ ಶೋ ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು: ಸಚಿವೆ ಶೋಭಾ ಕರಂದ್ಲಾಜೆ

0

ಬೆಂಗಳೂರು: ಮಕ್ಕಳ ಪರೀಕ್ಷೆ ಬಗ್ಗೆ ಮೋದಿ ವಿಶೇಷ ಕಾಳಜಿ ಹೊಂದಿದ್ದು, ಅವರ ಸೂಚನೆಯಂತೆ ರೋಡ್ ಶೋ‌ ಬದಲಾವಣೆ ಮಾಡಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ 6, 7 ಕ್ಕೆ ನಿಗದಿಯಾಗಿದ್ದು, ಎಲ್ಲ ತಯಾರಿ ನಡೆದಿದೆ ಮತ್ತು ಕಾರ್ಯಕರ್ತರಿಗೆ ಮಾಹಿತಿ ಕೊಟ್ಟಿದ್ದೇವೆ.

ಆದರೆ ಭಾನುವಾರ ನೀಟ್(NEET) ಪರೀಕ್ಷೆ ಇರುವ ಬಗ್ಗೆ ಪ್ರಧಾನಿಯವರ(PM) ಗಮನಕ್ಕೆ ತಂದೆವು. ಅವರಿಗೆ ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿ ಯುಳ್ಳವರು, ಪರಿಕ್ಷಾಪೇ ಚರ್ಚಾ ನಡೆಸಿದ್ದಾರೆ. ರೋಡ್ ಶೋ ನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಎಂದು ಹೇಳಿ ಅವರು ನೀಡಿದ ಸೂಚನೆಯಂತೆ ರೋಡ್ ಶೋ ನಲ್ಲಿ ಬದಲಾವಣೆ ಮಾಡಿದ್ದೇವೆ ಎಂದರು. ಮಕ್ಕಳ ಭವಿಷ್ಯ, ನೀಟ್ ಪರೀಕ್ಷೆಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಪ್ರಧಾನಿ ಅಪೇಕ್ಷೆಯಂತೆ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅದಲು ಬದಲಾಗಿವೆ.

ಶನಿವಾರ 26.5 ಕಿ.ಮೀ ದೂರದ ದೊಡ್ಡ ರೋಡ್ ಶೋ ಇರಲಿದೆ. ಭಾನುವಾರ ಚಿಕ್ಕ ರೋಡ್ ಶೋ ಗೊತ್ತುಪಡಿಸಲಾಗಿದೆ. ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ. ಭಾನುವಾರ ರೋಡ್ ಶೋ ಮಾರ್ಗದಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ನೀಡಲಿದ್ದು, ಸಹಕರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

About Author

Leave a Reply

Your email address will not be published. Required fields are marked *

You may have missed