ಗುಡುಗು ಸಹಿತ ಧಾರಾಕಾರ ಮಳೆಗೆ ಬೆಂಗಳೂರು ಜನರು ತತ್ತರ..!

0

ಬೆಂಗಳೂರು: ಬೆಂಗಳೂರು ನೆನ್ನೆ ರಾತ್ರಿ ಸುರಿದ ಜೋರು ಮಳೆಗೆ ತತ್ತರಿಸಿದ್ದು, ಪಶ್ಚಿಮ ವಲಯದ ಬಡಾವಣೆಗಳಲ್ಲಿನ(West Zone Barangay) ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಕೆರೆಯಂತಾಗಿದ್ದವು. ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಕಾಟನ್‌ ಪೇಟೆಯಲ್ಲಿ ಅತ್ಯಧಿಕ 58.5 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಗಾಳಿ ಸಹಿತ ಬಂದ ಜೋರು ಮಳೆಗೆ ಬಾಗಲಗುಂಟೆ ನಿಸರ್ಗ ಗ್ರ್ಯಾಂಡ್ ಹೋಟೆಲ್ ಬಳಿ ಹಾಗೂ ಮಲ್ಲೇಶ್ವರಂ ನಾಲ್ಕನೇ ಕ್ರಾಸ್(Malleswaram Fourth Cross) ಬಳಿ ಒಂದು ಮರದ ಕೊಂಬೆ ಬಿದ್ದಿದೆ.

ಇತ್ತ ಮಳೆಗೂ ಮುನ್ನವೇ ಕೋರಮಂಗಲದ ಮಾರವೇಲ್ ಆಸ್ಪತ್ರೆ ಬಳಿ ಮರವೊಂದು ಗಾಳಿಗೆ ಧರೆಗುರಳಿದೆ. ನೆನ್ನೆ ಸಂಜೆ 7 ಗಂಟೆ ನಂತರ ದಿಢೀರನೆ ಜೋರು ಮಳೆ ಆರಂಭವಾಯಿತು. ಸುಮಾರು ಒಂದು ಗಂಟೆ ಕಾಲ ಎಡೆಬಿಡದೇ ಸುರಿದ ಮಳೆಗೆ ಜನಜೀವ ಅಸ್ತವೆಸ್ತವಾಯಿತು. ಮಳೆಗೆ ನಗರದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ರಾತ್ರಿ ಹೆಚ್ಚು ಮಳೆ ಬಂದ ಪರಿಣಾಮ ಅಲ್ಲಿನ ಬಡಾವಣೆಗಳು ಅಕ್ಷರಶಃ ನಲುಗಿವೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗಿದೆ.

About Author

Leave a Reply

Your email address will not be published. Required fields are marked *

You may have missed