ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ಶಿಕ್ಷಕ ಆತ್ಮಹತ್ಯೆ: ಬಿಇಓ, ಸಿಆರ್​ಪಿ, ಮುಖ್ಯ ಶಿಕ್ಷಕ ಅಮಾನತು

0

ವಿಜಯಪುರ: ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ (Teacher) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಡೆದಿದೆ. ತಾಲೂಕಿನ ಸಾಸಾಬಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ (55) ಮೃತ ದುರ್ದೈವಿ. ಶಿಕ್ಷಕ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತನ್ನ (ಶಿಕ್ಷಕ ಬಸವರಾಜ್) ಸಾವಿಗೆ ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್​.ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್​​ಪಿ ಜಿ.ಎನ್ ಪಾಟೀಲ್ ಕಾರಣವೆಂದು ಉಲ್ಲೇಖಿಸಿದ್ದಾರೆ.

ಡೆತ್​ ನೋಟ್​ನಲ್ಲಿ ಏನಿದೆ?

ಎಸ್​ ಎಲ್ ಭಜಂತ್ರಿ ಮುಖ್ಯಶಿಕ್ಷಕ ಹುದ್ದೆಯನ್ನು, ಶಿಕ್ಷಕ ಬಸವರಾಜಗೆ ವರ್ಗಾಯಿಸಿದ್ದರು. ಈ ವೇಳೆ ಶಿಕ್ಷಕರ, ಹಾಗೂ ಮಕ್ಕಳ ಹಾಜರಾತಿ ದಾಖಲಿಸುವ 1ನೇ ನಂಬರ್ ರಿಜಿಸ್ಟರ್​ನ್ನು ಹಸ್ತಾಂತರ ಮಾಡಿದ್ದರು. ಆದರೆ ಭಜಂತ್ರಿ ವಿದ್ಯಾರ್ಥಿಗಳ ದಾಖಲಾತಿ ವಿವರ, ಜಾತಿ, ಜನ್ಮ ದಿನಾಂಕಗಳನ್ನು 1ನೇ ನಂಬರ್ ರಿಜಿಸ್ಟರ್​ ಸರಿಯಾಗಿ ದಾಖಲಿಸದೇ,​ ಅಪೂರ್ಣ ರೀತಿಯಲ್ಲಿ ವರ್ಗಾಯಿಸಿದ್ದರು.

ಈ ಸಂಬಂಧ ಎಸ್​ ಎಲ್ ಭಜಂತ್ರಿಯನ್ನು, ಶಿಕ್ಷಕ ಬಸವರಾಜ್​ ಪ್ರಶ್ನಿಸಿದರೇ “ನಾನು ಸಿಆರ್​ಪಿ ಆಗುತ್ತೇನೆ, ಆಗಾಗ ಬಂದು 1ನೇ ನಂಬರ್ ರಿಜಿಸ್ಟರ್ ಸರಿಪಡಿಸುವುದಾಗಿ ಹೇಳಿದ್ದರು. ಆದರೆ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ ರಿಜಿಸ್ಟರ್​ನ್ನು ಸರಿಪಡಿಸದೇ ಸತಾಯಿಸುತ್ತಿದ್ದರು. ಈ ಬಗ್ಗೆ ಸಿಂದಗಿ ಬಿಇಓ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ಇದಕ್ಕೆ ಪ್ರತಿಯಾಗಿ ಬಿಇಓ ಹೆಚ್ ಎಂ ಹರಿನಾಳ ಟಾರ್ಚರ್ ನೋಟಿಸ್ ಕೊಡುತ್ತಿದ್ದನು. ಸಾಸಾಬಳ ಶಾಲೆಯ ಸಹಶಿಕ್ಷಕ ಶಿಕ್ಷಕ ಬಿಎಂ ತಳವಾರ ನಿಂದಲೂ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed