ಚುನಾವಣಾ ಕರ್ತವ್ಯದಿಂದ ದೂರ ಸರಿಯಲು ಶಿಕ್ಷಕಿಯ ಹೈ ಡ್ರಾಮ – ಎಫ್‌ಐಆರ್ ದಾಖಲು

0

ಕ್ನೋ: ಮುನ್ಸಿಪಾಲ್ ಚುನಾವಣೆಯಲ್ಲಿ (Municipal Election) ಮತದಾನ ಕರ್ತವ್ಯದಿಂದ ದೂರ ಸರಿಯುವ ಸಲುವಾಗಿ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ನಕಲಿ covid-19 ಪಾಸಿಟಿವ್ ರಿಪೋರ್ಟ್ ನೀಡಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನ (Pilibhit) ಪುರನ್‌ಪುರ ಪ್ರದೇಶದಲ್ಲಿ ನಡೆದಿದ್ದು.

 

ಮೇ 11ರಂದು ಪಿಂಕ್ ಮತಗಟ್ಟೆಯಲ್ಲಿ ನಡೆಯಲಿರುವ ಪುರಸಭಾ ಚುನಾವಣೆಗೆ ಆಯೋಜಿಸಿದ್ದ ಮತಗಟ್ಟೆ ಸಂಖ್ಯೆ 3ರಲ್ಲಿ ರಿತು ತೋಮರ್ ಅವರನ್ನು ಮತಗಟ್ಟೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಲಾ ಶಿಕ್ಷಕಿ ಕೋವಿಡ್ ಪಾಸಿಟಿವ್ (Covid Positive) ಎಂಬ ನಕಲಿ ದಾಖಲೆಯನ್ನು ತೋರಿಸಿದ್ದು, ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸಿದಾಗ ಅದು ಇನ್ನೊಬ್ಬ ವ್ಯಕ್ತಿಯ ದಾಖಲೆಗಳು ಎಂದು ತಿಳಿದುಬಂದಿದೆ.

ನಂತರ ನಕಲಿ ದಾಖಲೆ ನೀಡಿದ ಶಿಕ್ಷಕಿ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಇವರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಮೂಲ ಶಿಕ್ಷಾ ಅಧಿಕಾರಿ (BSA) ಅಮಿತ್ ಕುಮಾರ್ ಸಿಂಗ್ ಅವರಿಗೆ ಮಂಗಳವಾರ ಆದೇಶ ಹೊರಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed