ಪತ್ನಿ ಮೇಲೆ ಕೊಡಗೋಲಿನಿಂದ ಹಲ್ಲೆ ನಡೆಸಿದ ಪತಿಗೆ ಜೀವಾವಧಿ ಶಿಕ್ಷೆ..! ಸತ್ರ ಕೋರ್ಟ್ ಆದೇಶ

0

ಬೆಂಗಳೂರು: 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು, ವರದಕ್ಷಣೆಗಾಗಿ ಪತ್ನಿ ಮೇಲೆ ಕೊಡಗೋಲಿನಿಂದ 35 ಬಾರಿ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ರಘು ಶಿಕ್ಷೆಗೆ ಒಳಗಾದ ಅಪರಾಧಿ.

2009ರ ಆಗಸ್ಟ್‌ನಲ್ಲಿ ಅಂಬಿಕಾ ಮತ್ತು ರಘು ಮದುವೆ ಆಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಮದುವೆ ಸಮಯದಲ್ಲಿ ಚಿನ್ನಾಭರಣ ಮತ್ತು 50 ಸಾವಿರ ರೂ. ವರದಕ್ಷಿಣೆ ಪಡೆದಿದ್ದ ರಘು, ಮತ್ತೆ ಹೆಚ್ಚಿನ ವರದಕ್ಷಣೆ ತರುವಂತೆ ಪ್ರತಿದಿನ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ.

2012ರ ಡಿಸೆಂಬರ್ 8ರ ರಾತ್ರಿ 8 ಗಂಟೆಯಲ್ಲಿ ಮಗುವಿನ ಜತೆ ಮಲಗಿದ್ದ ಅಂಬಿಕಾಳನ್ನು ದೋಣ್ಣೆ ಮತ್ತು ಕೊಡುಗೊಲಿನಿಂದ ಅಪರಾಧಿ ರಘು ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯಪುರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಾಳೇಗೌಡ, ಕೃತ್ಯ ಎಸಗಿದ ರಘುನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ತನಿಖೆ ಬಳಿಕ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಕೊಲೆ ಎಸಗಿದ ಪತಿ ರಘುಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ನ್ಯಾ.ಕೆ.ಎಸ್.ಜ್ಯೋತಿ, ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಎಚ್.ಆರ್. ಸತ್ಯವತಿ ಅವರು ವಾದ ಮಂಡಿಸಿದ್ದರು.

About Author

Leave a Reply

Your email address will not be published. Required fields are marked *

You may have missed