ನಗರದಲ್ಲಿದೆ 4 ಡೆಡ್ಲಿ ಅಂಡರ್ ಪಾಸ್ : ಅಧ್ಯಯನಕ್ಕೆ IISC ತಜ್ಞರ ಮೊರೆ ಹೋದ BBMP

0

ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣ ಮಳೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ(Bengaluru Rain). ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು 2 ಸಾವಿನ ಬಳಿಕ ಬುದ್ದಿ ಕಲಿತ ಬಿಬಿಎಂಪಿ(BBMP) IISC ತಜ್ಞರ ಮೊರೆ ಹೋಗಿದೆ.

ಬಿಬಿಎಂಪಿಯ 18 ಅಂಡರ್​ ಪಾಸ್​ಗಳ ಕಾರ್ಯಕ್ಷಮತೆ ಬಗ್ಗೆ ವರದಿ ನೀಡಲು ತಜ್ಞರಿಗೆ ಸೂಚಿಸಿದೆ. ಹಾಗೂ ಅಂಡರ್‌ಪಾಸ್‌ಗಳಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಅಂಡರ್‌ಪಾಸ್‌ಗಳಲ್ಲಿ ಬಿಬಿಎಂಪಿ ತೆಗೆದುಕೊಳ್ಳಲು ಉದ್ದೇಶಿಸಲಾಗಿರುವ ಪ್ರಮುಖ ಕ್ರಮಗಳು

1 – ರಸ್ತೆಯ ಅಕ್ಕ ಪಕ್ಕದಲ್ಲಿ ಬೀಳುವ ಎಲ್ಲಾ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಕೆಳಸೇತುವೆಯ ಏರುವ ಮತ್ತು ಇಳಿಯುವ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿಯನ್ನು ನಿರ್ಮಿಸಿ ನೇರವಾಗಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವುದು

2 – ರಸ್ತೆಯ ಮೇಲೆ ಭಾಗದ ಮಳೆ ನೀರು ಕೆಳಸೇತುವೆಗೆ ಹೋಗದಂತೆ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿಯನ್ನು ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರವನ್ನು ಸಹ ನಿರ್ಮಿಸುವುದು

3- ಕೆಳಸೇತುವೆಯ ಕೆಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸುವುದು

4- Vertical Clearance Gauge Beam ಅನ್ನು ಆಳವಡಿಸಿ ಅತೀ ಪ್ರವಾಹ ಉಂಟಾದ ತುರ್ತು ಸಂಧರ್ಭಗಳಲ್ಲಿ ಒಂದು Boom Barrier ಅನ್ನು ಸಹ ನಿರ್ಮಿಸುವುದು ಅಗತ್ಯ ಸಂದರ್ಭದಲ್ಲಿ ಬಳಸುವುದು

5- ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರ ಪೋಲಿಸ್ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡುವುದು

15 ದಿನಗಳಲ್ಲಿ ಎಲ್ಲ ಕ್ರಮಗಳನ್ನುಪೂರ್ಣಗೊಳಿಸಲು ಆದೇಶ

About Author

Leave a Reply

Your email address will not be published. Required fields are marked *

You may have missed