ಬೆಂಗಳೂರಿನ ಹಲವೆಡೆ ಪವರ್ ಕಟ್ : ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿಕೊಳ್ಳಿ

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ಜಯನಗರ ಡಿವಿಜನ್ನ ಕೆಪಿಟಿಸಿಎಲ್ ಸಬ್ ಸ್ಟೇಷನ್‌ನಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ನಗರದ ಹಲವೆಡೆ ಪವರ್ ಕಟ್ ಇರಲಿದೆ.

 

ಅಶೋಕ ನಗರ, ಗರುಡಾ ಮಾಲ್ ಸುತ್ತಮುತ್ತ, ಬ್ರೆಂಟನ್ ರಸ್ತೆ, ಐಸಿಐಸಿಐ ಬ್ಯಾಂಕ್, ಎಂಬಸ್ಸಿ ಹೈಟ್ಸ್, ಅರ್ಬನ್ ಲೈಫ್ಸ್, ಅಸ್ಟಿನ್ ಟೌನ್, ವಿಮಾನ ನಿಲ್ದಾಣ ರಸ್ತೆ, ವಿವೇಕ ನಗರ, ವಿಕ್ಟೋರಿಯಾ ಲೇಔಟ್, ಟ್ರಿನಿಟಿ ಚರ್ಚ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಲೆವೆಲ್ಲಿ ರೋಡ್,ಸೇಂಟ್ ಮಾರ್ಕ್ಸ್ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ.

ಇನ್ನು ರಿಚ್ಮಂಡ್ ಟೌನ್, ಲಾಂಗ್ಫೋರ್ಟ್ ರಸ್ತೆ, ಬ್ರೈಟ್ ಸ್ಟ್ರೀಟ್, ಫುಡ್ ವರ್ಡ್ ರಸ್ತೆಗಳು, ಬ್ರಿಗೇಡ್ ರಸ್ತೆ, ವಿಠಲ್ ಮಲ್ಯ ರಸ್ತೆ, ಶಾಪರ್ ಸ್ಟಾಪ್, ನೀಲಸಂದ್ರ, ಆನೇಪಾಳ್ಯ, ಸಿದ್ದಯ್ಯ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತೆಗೆಯಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

About Author

Leave a Reply

Your email address will not be published. Required fields are marked *

You may have missed