ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ JDS ಗೆಲ್ಲುತ್ತದೆ: ಹೆಚ್ ಡಿ ಕುಮಾರಸ್ವಾಮಿ

0

ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗೆ ವಸತಿ ಸಚಿವ ವಿ ಸೋಮಣ್ಣ ಆಮೀಷ ಒಡ್ಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಪದ್ಮನಾಭ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಸೋಮಣ್ಣ (Somanna)ಅವರು ಖಾಸಗಿ ಕಾರಿಗೆ ಗೂಟ ಹಾಕಿ ಕೊಡುತ್ತಾರೋ ಗೊತ್ತಿಲ್ಲ.

ಇಂತಹ ಆಮಿಷಗಳೆಲ್ಲ ಈಗ ಉಪಯೋಗಕ್ಕೆ ಬರಲ್ಲ ಎಂದರು. ಈ ಬಾರಿ ಕಾಂಗ್ರೆಸ್ (Congress) ಮತ್ತು ಬಿಜೆಪಿ(BJP)ಗಿಂತ ಹೆಚ್ಚು ಸ್ಥಾನ ಜೆಡಿಎಸ್ ಗೆಲ್ಲುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂತ ಅಧಿಕ ಸ್ಥಾನಗಳ ಅಂತರ ಇರುತ್ತದೆ. ನಾನು ಏನೂ 123 ಗುರಿ ಇಟ್ಟುಕೊಂಡಿದ್ದೇನೆ.

ಅದಕ್ಕೆ ಹಣದ ಬಲ ಕಡಿಮೆ ಆಗಬಹುದು. ಆದರೆ, ಆ ಪಕ್ಷಗಳಷ್ಟು ಆರ್ಥಿಕ ಸಂಪೂನ್ಮೂಲ ಇದ್ದಿದ್ದರೆ ಇವತ್ತೇ 150 ಸ್ಥಾನ ಗೆಲ್ಲುತ್ತೇವೆ ಎಂದು ಘೋಷಣೆ ಮಾಡುತ್ತಿದ್ದೆ. ಈಗಲೂ ನನಗೆ 123 ಸ್ಥಾನ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲುತ್ತದೆ ಎಂದು ರಕ್ತದಲ್ಲಿ ಬರೆದುಕೊಡುತ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಾಪ ಡಿ.ಕೆ. ಶಿವಕುಮಾರ್ ರಕ್ತದಲ್ಲಿ ಬರೆದುಕೊಡೋದು ಬೇಡ. ಆಮೇಲೆ ರಕ್ತದ ಕೊರತೆ ಆದರೆ ಕಷ್ಟ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

You may have missed