ರಾಜ್ಯಾದ್ಯಂತ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಬೆಂಗಳೂರು: ವಿಧಾನಸೌಧ ಮುಂದೆ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮ ಆರಂಭವಾಗಿದ್ದು ರಾಜ್ಯಪಾಲ ತಾವರ್​ಚಂದ್ ಗೆಹ್ಲೋಟ್ ಯೋಗದ ಮಹತ್ವವನ್ನು ಸಾರಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಯೋಗ ಇದೆ. ಯೋಗದ ಮಹತ್ವದ ಕುರಿತು ನಮ್ಮ ಹಳೆಯ ಗ್ರಂಥಗಳಲ್ಲಿ ಉಲ್ಲೇಖವಿದೆ.

ಯೋಗಭ್ಯಾಸದಿಂದ ಭೌತಿಕ, ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತೆ. ಪ್ರಧಾನಿ ಮೋದಿ ಯೋಗ ದಿನ ಆಚರಣೆ ಬಗ್ಗೆ ವಿಶ್ವಸಂಸ್ಥೆ ಬಳಿ ಪ್ರಸ್ತಾಪ ಮಾಡಿದ್ದು, ಅದಕ್ಕೆ ಒಪ್ಪಿ ಇಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗ್ತಿದೆ ಎಂದರು.

ವಿಶ್ವ ಯೋಗ ದಿನ ಹಿನ್ನಲೆ ದೇಶಾದ್ಯಂತ ಯೋಗ ಮಾಡುವ ಮೂಲಕ ಭಾರತದ ಶಕ್ತಿಯನ್ನ ಜಗತ್ತಿಗೆ ತೋರಿಸಲಾಗ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಯೋಗ ಮಾಡುವ ಮೂಲಕ ವಿಶ್ವ ಯೋಗಾ ದಿನವನ್ನ ಆಚರಿಸಲಾಗ್ತಿದೆ.

About Author

Leave a Reply

Your email address will not be published. Required fields are marked *

You may have missed