ಹೆಚ್ಚಿನ ಲಗೇಜ್ ನ ಶುಲ್ಕವನ್ನು ಪಾವತಿಸಲಾಗದೆ ಏರ್ಪೋಟ್ ನಲ್ಲಿ ಲಗೇಜ್ ಬಿಟ್ಟು ಹೋದ ವಿದ್ಯಾರ್ಥಿ

0

ಬೆಂಗಳೂರು: ಹೆಚ್ಚಿನ ಲಗೇಜ್ ನ ಶುಲ್ಕವನ್ನು ಪಾವತಿಸಲಾಗದೆ ಮಲೇಷ್ಯಾಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬರು ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಮ್ಮ ಬಟ್ಟೆ ಮತ್ತು ಆಹಾರದ ಪ್ಯಾಕಿಂಗ್ ವಸ್ತುಗಳನ್ನು ಬಿಟ್ಟು ಹೋಗು ವಂತಾಗಿದೆ.

ಹೆಚ್ಚುವರಿ ಲಗೇಜ್ ಶುಲ್ಕವಾಗಿ ಪ್ರತಿ ಕೆಜಿಗೆ 2,000 ರೂಪಾಯಿ ನೀಡುವಂತೆ ಏರ್‌ಏಷ್ಯಾಗ್ರೌಂಡ್ ಸಿಬ್ಬಂದಿ ವಿದ್ಯಾರ್ಥಿಗೆ ತಿಳಿಸಿದ್ದಾರೆ.

ಆದ್ರೆ ಏರ್‌ಏಷ್ಯಾದ ಅಧಿಕೃತ ಪೋರ್ಟಲ್ನಲ್ಲಿ ಪ್ರತಿ ಕೆಜಿಗೆ 500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಪ್ರಯಾಣಿಕ ಹೇಳಿದ್ದಾನೆ. ಆಗ ಏರ್‌ಏಷ್ಯಾ ಗ್ರೌಂಡ್ ಸಿಬ್ಬಂದಿ, ನೀವು ತಪ್ಪು ವೆಬ್ಸೈಟ್ಗೆ ಹೋಗಿ ಮಾಹಿತಿ ಪಡೆದಿದ್ದೀರಿ. ಲಗೇಜ್ ಶುಲ್ಕವಾಗಿ ಪ್ರತಿ ಕೆಜಿಗೆ 2,000 ರೂಪಾಯಿ ಕಟ್ಟಿ ಎಂದಿದ್ದಾರೆ. ಹಣ ಕಟ್ಟಲಾಗದೆ ವಿದ್ಯಾರ್ಥಿ ತನ್ನ ಕೆಲ ಬಟ್ಟೆಗಳು, ಆಹಾರದ ಪ್ಯಾಕೇಟ್ಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾನೆ. ಹಾಗೂ ಏರ್ ಏಷ್ಯಾದ ವಿರುದ್ಧ ಆನ್ಲೈನ್ ಮೂಲಕ ವಿದ್ಯಾರ್ಥಿ ದೂರು ದಾಖಲಿಸಿದ್ದಾನೆ.

About Author

Leave a Reply

Your email address will not be published. Required fields are marked *

You may have missed