Bangalore: ಬರೋಬ್ಬರಿ 90 ಕೋಟಿ ಮೌಲ್ಯದ ಮಾದಕ ವಸ್ತು ನಾಶ..!

0

ಬೆಂಗಳೂರು: ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 90 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಗರದ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸ್ಥಳದಲ್ಲಿ ನಾಶಪಡಿಸಿರುವ ಘಟನೆ ಜರುಗಿದೆ. ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಪ್ರಯುಕ್ತ ಇಂದು 4110 ಕೆಜಿ ಗಾಂಜಾ, 11 ಕೆಜಿ ಗಾಂಜಾ ಆಯಿಲ್, 22 ಕೆಜಿ ಆಶಿಷ್ ಆಯಿಲ್, 8 ಕೆಜಿ ಅಫೀಮ್, 5.5 ಕೆಜಿ ಚರಸ್, 62.7 ಕೆಜಿ ಎಂಡಿಎಂಎ ಪೌಡರ್, 8073 ಟ್ಯಾಬ್ಲೆಟ್ ಸೇರಿದಂತೆ 90 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಗದಿಯಾಗಿದ್ದ ದಾಬಸ್‍ಪೇಟೆಯ ಕೈಗಾರಿಕಾ ಸ್ಥಳದಲ್ಲಿ ದಹನಗೊಳಿಸಲಾಗಿದೆ.

 

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಅಕ್ಟೋಬರ್‍ನಿಂದ ಈ ವರ್ಷದ ಮಾರ್ಚ್‍ವರೆಗೆ ಎನ್‍ಡಿಪಿಎಸ್ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 4297.8 ಕೆಜಿ ತೂಕದ ಸುಮಾರು 90.08 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲು ಸರ್ವೋಚ್ಚನ್ಯಾಯಾಲಯದ ಆದೇಶದ ಅನುಸಾರಾಗಿ ರಚಿಸಲಾಗಿರುವ ಡ್ರಗ್ಸ್ ಡಿಸ್ಟೋಸಬಲ್ ಕಮಿಟಿಯು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿತ್ತು. ಅದರಂತೆ ಇಂದು ನ್ಯಾಷನಲ್ ಕಂಟ್ರೋಲ್ ಬ್ಯೂರೋ ವತಿಯಿಂದ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ದಕ್ಷಿಣ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಸಲುವಾಗಿ ಈ ಮಾದಕ ವಸ್ತುಗಳನ್ನು ದಹಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed