ಭರ್ಜರಿ ಕಾರ್ಯಾಚರಣೆ: ಚುನಾವಣೆ ಹೊತ್ತಲ್ಲೆ 2.5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

0

ಬೆಂಗಳೂರು: ಬೆಂಗಳೂರಿನಲ್ಲಿ 2.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸಾಗಣೆ ಮಾಡಲು ತಮ್ಮ ಕಾರನ್ನೇ ಮಾಡಿಫೈ ಮಾಡಿ ಸ್ಮಗ್ಲಿಂಗ್‌ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶಗಳಿಂದ ಬಂದು ಬೆಂಗಳೂರಲ್ಲಿ ವಾಸವಿದ್ದ ವಿದೇಶಿ ಪ್ರಜೆಗಳು ಸ್ಮಗ್ಲಿಂಗ್‌ ಮಾಡಲು ತೆಲುಗಿನ ಅಲ್ಲು ಅರ್ಜುನ್‌ ಅವರ ಪುಷ್ಪ ಸಿನಿಮಾ ಮಾದರಿಯಲ್ಲಿ ತಮ್ಮ ಕಾರನ್ನು ಮಾರ್ಪಾಡು ಮಾಡಿರುವುದು ಬೆಳಕಿಗೆ ಬಂದಿದೆ.

ಈಗ ಸ್ಮಗ್ಲಿಂಗ್‌ ವಸ್ತುಗಳ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಡಿ ಓರ್ವ ಮಹಿಳೆ, ನಾಲ್ವರು ವಿದೇಶಿ‌ ಪ್ರಜೆಗಳು ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 25 ಕೆಜಿ ಗಾಂಜಾ ಹಾಗೂ 1 ಕೆಜಿ ಕಿಸ್ಟ್ರಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನು ದೊಡ್ಡ ಮಟ್ಟದ ಮಾದಕ ವಸ್ತುವನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ವರ್ಚುವಲ್ ಮೂಲಕ ಲೊಕೇಷನ್ ಹಾಕಿಸಿಕೊಂಡು ನಂತರ ಆ ಸ್ಥಳಕ್ಕೆ ತೆರಳಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ಗಾಂಜಾವನ್ನು ಆಂಧ್ರಪ್ರದೇಶ ಅರಕು ಪ್ರದೇಶದಿಂದ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದರು. ಪೋಸ್ಟ್ ಮ್ಯಾನ್ ಇರಬಹುದು, ಕೊರಿಯರ್ ಏಜೆನ್ಸಿ ಈ ಹಿಂದೆ ಸರಬರಾಜು ಆಗ್ತಾ ಇತ್ತು. ಆದರೆ, ಈಗ ಅದನ್ನು ಸುಧಾರಣೆ ಮಾಡಿಕೊಂಡಿರುವ ಆರೋಪಿಗಳು ಕಾರನ್ನು ಮಾಡಿಫೈ ಮಾಡಿಕೊಂಡು ಸ್ಮಗ್ಲಿಂಗ್‌ ಮಾಡಲು ಮುಂದಾಗಿದ್ದರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

About Author

Leave a Reply

Your email address will not be published. Required fields are marked *

You may have missed