: ಟೀಂ ಇಂಡಿಯಾ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಡಲು ಬಿಸಿಸಿಐ ನಿರಾಕರಣೆ

0

ಮುಂಬೈ: ಈಗಾಗಲೇ ಭಾರತ ತಂಡ ಪಾಕಿಸ್ತಾನದಲ್ಲಿ ಏಷ್ಯಾಕಪ್‌ (AisaCup) ಪಂದ್ಯವನ್ನಾಡಲು ಬಿಸಿಸಿಐ ನಿರಾಕರಿಸಿದ್ದು, ಪಾಕಿಸ್ತಾನ ತಂಡ ಕೂಡ ಭಾರತ ನಿಗದಿಪಡಿಸಿದ ಸ್ಥಳದಲ್ಲಿ ವಿಶ್ವಕಪ್‌ ಆಡುವುದಿಲ್ಲ ಎಂದು ಕಿರಿಕ್‌ ತೆಗೆದಿದೆ. ಪಾಕ್‌ ಮಾಜಿ ಕ್ರಿಕೆಟಿಗರು ಪಾಕ್‌ ತಂಡ ಭಾರತಕ್ಕೆ ಹೋಗದಂತೆ ಸಲಹೆ ನೀಡಿದ್ದಾರೆ.

ಈ ಕುರಿತು ಟೀಂ ಇಂಡಿಯಾ (Team India) ಸ್ಪಿನ್‌ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅಶ್ವಿನ್‌, 2023ರ ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಇನ್ನೂ ಪ್ರಕಟಿಸಿಲ್ಲ. ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಷ್ಟೇ ಎಂದಿದ್ದಾರೆ.

ಈ ನಡುವೆ ಪಾಕಿಸ್ತಾನ ಸ್ಥಳ ಬದಲಾಯಿಸುವಂತೆ ಮನವಿ ಮಾಡಿದೆ. ಕರಡು ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ ಬೆಂಗಳೂರಿನಲ್ಲಿ, ಅಫ್ಘಾನಿಸ್ತಾನ ಆಸ್ಟ್ರೇಲಿಯಾ  ವಿರುದ್ಧ ಚೆನ್ನೈನ ಚೇಪಾಕ್‌ ಕ್ರೀಡಾಂಗಣದಲ್ಲಿ ಆಡಲಿದೆ. ಆದ್ರೆ ಆವರ ಸ್ಥಳ ಬದಲಾಯಿಸುವಂತೆ ಕೋರಿದ್ದಾರೆ. ಯಾವುದೇ ಪಂದ್ಯಗಳಿಗೆ ಭದ್ರತೆಯ ಕಾರಣವಿದ್ದರೆ ಮಾತ್ರ ಐಸಿಸಿ ಅಂತಹ ಮನವಿಯನ್ನ ಪರಿಗಣಿಸುತ್ತೆ. ಇಲ್ಲದಿದ್ದರೆ ಪಾಕಿಸ್ತಾನ ತಂಡ ನಿಗದಿ ಮಾಡಿದ ಸ್ಥಳದಲ್ಲೇ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಚೆನ್ನೈ ಪಿಚ್‌ ಸ್ಪಿನ್‌ಗೆ ಪೂರಕವಾಗಿದೆ, ಆಸ್ಟ್ರೇಲಿಯಾ-ಅಫ್ಘಾನಿಸ್ತಾನದ ಎದುರು ಆಡುವುದಾದರೆ ಈಗಾಗಲೇ ಆ ಪಿಚ್‌ನಲ್ಲಿ ಅನುಭವ ಹೊಂದಿರುವ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ. 2023ರ ಐಪಿಎಲ್‌ ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದ ಆಫ್ಘನ್‌ ಬೌಲರ್‌ಗಳಾದ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಈಗಾಗಲೇ ಈ ಪಿಚ್‌ನಲ್ಲಿ ಆಡಿರುವ ಅನುಭವ ಪಡೆದಿದ್ದಾರೆ. ಆದ್ರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಪಿಚ್‌ ಆಗಿದ್ದು, ಪಾಕಿಸ್ತಾನ ಎದುರಾಳಿ ತಂಡವನ್ನ ಹೇಗೆ ಎದುರಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತನ್ನ ಮನವಿಯಲ್ಲೇ ಚೆನ್ನೈನಲ್ಲಿ ಆಡಲು ಪರಿಸ್ಥಿತಿ ಅನುಕೂಲವಾಗಿದೆ ಎಂದು ಹೇಳಿದೆ. ಒಂದು ವೇಳೆ ಅಫ್ಘಾನಿಸ್ತಾನ ತಂಡಕ್ಕೆ ಸ್ಥಳ ಬದಲಾವಣೆ ಮಾಡಿದರೆ ಇದರ ಪ್ರಯೋಜನ ಪಾಕಿಸ್ತಾನ ಪಡೆಯುತ್ತದೆ. ಹಾಗಾಗಿ ಐಸಿಸಿ ಈ ಮನವಿಯನ್ನ ಪರಿಗಣಿಸುವುದು ಅನುಮಾನವಿದೆ. ಒಂದು ವೇಳೆ ಪಾಕಿಸ್ತಾನ ಭದ್ರತೆಗೆ ಸಂಬಂಧಿಸಿದಂತೆ ಮೌಲ್ಯಯುತ ಕಾರಣ ನೀಡಿದ್ರೆ ಪಂದ್ಯ ಸ್ಥಳಾಂತರಕ್ಕೆ ಅನುಮತಿ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

About Author

Leave a Reply

Your email address will not be published. Required fields are marked *

You may have missed