ಆಸ್ಪ್ರೇಲಿಯನ್ ಓಪನ್ ಟೂರ್ನಿಯಲ್ಲಿ ವಿಕ್ಟೋರಿಯಾ ಅಜರೆಂಕಾ ಸೆಮೀಸ್ ಪ್ರವೇಶ

0

2012, 2013ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿದ್ದ ಬೆಲಾರುಸ್‌ನ ವಿಕ್ಟೋರಿಯಾ ಅಜರೆಂಕಾ 10 ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದು, ವೃತ್ತಿಬದುಕಿನ 3ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2013ರ ಯುಎಸ್‌ ಓಪನ್‌ ಬಳಿಕ ಮತ್ತೊಮ್ಮೆ ಗ್ರ್ಯಾನ್‌ ಸ್ಲಾಂ ಸೆಮೀಸ್‌ಗೇರಲು ಅಜರೆಂಕಾಗೆ 7 ವರ್ಷ ಬೇಕಾಗಿತ್ತು.

2020ರ ಯುಎಸ್‌ ಓಪನ್‌ ಸೆಮೀಸ್‌ ಪ್ರವೇಶಿಸಿದ್ದ ಮಾಜಿ ವಿಶ್ವ ನಂ.1 ಆಟಗಾರ್ತಿ, ಈ ಬಾರಿ ಪ್ರಶಸ್ತಿ ಫೇವರಿಟ್‌ ಎನಿಸಿದ್ದಾರೆ.

ಮಂಗಳವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 6-4, 6-1 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಕಜಸಕಸ್ತಾನದ ಎಲೈನಾ ರಬೈಕೆನಾ 2017ರ ಫ್ರೆಂಚ್‌ ಓಪನ್‌ ಚಾಂಪಿಯನ್‌, ಲಾತ್ವಿಯಾದ ಯೆಲೆನಾ ಓಸ್ಟಪೆಂಕೊ ವಿರುದ್ಧ 6-2, 6-4ರಲ್ಲಿ ಜಯಿಸಿದರು. ಸೆಮೀಸ್‌ನಲ್ಲಿ ಅಜರೆಂಕಾ ಹಾಗೂ ರಬೈಕೆನಾ ಮುಖಾಮುಖಿಯಾಗಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾದ ಕರೆನ್‌ ಖಚನೊವ್‌, 1998ರ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ವಿಜೇತ ಪೀಟರ್‌ ಕೋರ್ಡಾರ ಪುತ್ರ ಅಮೆರಿಕದ ಸೆಬಾಸ್ಟಿಯನ್‌ ಕೋರ್ಡಾ ವಿರುದ್ಧ ವಾಕ್‌ ಓವರ್‌ ಪಡೆದು ಸೆಮೀಸ್‌ಗೇರಿದರು. ಮೊದಲೆರಡು ಸೆಟ್‌ ಸೋತಿದ್ದ ಕೋರ್ಡಾ 3ನೇ ಸೆಟ್‌ನಲ್ಲಿ ಬಲಗೈ ಮಣಿಕಟ್ಟಿಗೆ ಗಾಯಗೊಂಡು ಆಟ ನಿಲ್ಲಿಸಿದರು. ಕಳೆದ ವರ್ಷ ಯುಎಸ್‌ ಓಪನ್‌ ಸೆಮೀಸ್‌ನಲ್ಲಿ ಸೋತಿದ್ದ ಖಚನೋವ್‌ ಚೊಚ್ಚಲ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದು ಕ್ವಾರ್ಟರ್‌ನಲ್ಲಿ ಚೆಕ್‌ ಗಣರಾಜ್ಯದ ಇಜಿ ಲೆಹೆಚ್ಕಾ ವಿರುದ್ಧ 6-3, 6-6(7/2), 6-4ರಿಂದ ಗೆದ್ದು ಗ್ರೀಸ್‌ನ ಸ್ಟೆಫಾನೋ ಸಿಟ್ಸಿಪಾಸ್‌ ಸತತ 3ನೇ ಬಾರಿ ಟೂರ್ನಿಯಲ್ಲಿ ಸೆಮೀಸ್‌ ಪ್ರವೇಶಿಸಿದರು.

About Author

Leave a Reply

Your email address will not be published. Required fields are marked *

You may have missed