ಆಸ್ಟ್ರೇಲಿಯಾ ಎದುರು 3 ವಿಕೆಟ್ ರೋಚಕ ಜಯ ಸಾಧಿಸಿದ ಬೆನ್ ಸ್ಟೋಕ್ಸ್

0

ಪ್ರತಿಷ್ಠಿತ ಆಯಷಸ್‌ ಟೆಸ್ಟ್‌ ಸರಣಿ ಮತ್ತೊಮ್ಮೆ ಥ್ರಿಲ್ಲರ್‌ಗೆ ಸಾಕ್ಷಿಯಾಗಿದ್ದು, ಈ ಬಾರಿ ಇಂಗ್ಲೆಂಡ್‌ನ ಕೆಚ್ಚೆದೆಯ ಆಟದ ಮುಂದೆ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಕೊನೆಗೂ ಮಂಡಿಯೂರಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಸರಣಿಯ 3ನೇ ಪಂದ್ಯದಲ್ಲಿ ಭಾನುವಾರ ಇಂಗ್ಲೆಂಡ್‌ 3 ವಿಕೆಟ್‌ ಗೆಲುವು ಸಾಧಿಸಿತು.

ಮೊದಲೆರಡು ಪಂದ್ಯ ಗೆದ್ದಿದ್ದ ಆಸೀಸ್‌ ಈ ಪಂದ್ಯವನ್ನೂ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಕನಸು ಕೈಗೂಡಲಿಲ್ಲ. ಇದರ ಹೊರತಾಗಿಯೂ ಆಸೀಸ್‌ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

ಗೆಲುವಿಗೆ 251 ರನ್‌ ಗುರಿ ಪಡೆದಿದ್ದ ಇಂಗ್ಲೆಂಡ್‌ 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 27 ರನ್‌ ಗಳಿಸಿತ್ತು. ತಂಡದ ಗೆಲುವಿಗೆ ಭಾನುವಾರ ಇನ್ನೂ 224 ರನ್‌ ಬೇಕಿತ್ತು. ಆದರೆ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್‌ ಹ್ಯಾರಿ ಬ್ರೂಕ್‌ ಹಾಗೂ ಕೊನೆಯಲ್ಲಿ ಮಾರ್ಕ್‌ ವುಡ್‌, ಕ್ರಿಸ್‌ ವೋಕ್ಸ್‌ ನೆರವಿನಿಂದ ಪಂದ್ಯ ತನ್ನದಾಗಿಸಿಕೊಂಡಿತು.

ಆರಂಭಿಕರಾದ ಜ್ಯಾಕ್‌ ಕ್ರಾವ್ಲಿ(44), ಬೆನ್‌ ಡಕೆಟ್‌(23) ಕೊಂಚ ಪ್ರತಿರೋಧ ತೋರಿದರೂ ಇವರಿಬ್ಬರ ನಿರ್ಗಮನದ ಬಳಿಕ ಆಸೀಸ್‌ ಮೇಲುಗೈ ಸಾಧಿಸಿತು. ರೂಟ್‌(21), ಅಲಿ (05), ಸ್ಟೋಕ್ಸ್ (13), ಬೇರ್‌ಸ್ಟೋವ್‌(05) ನಿರ್ಣಾಯಕ ಹಂತದಲ್ಲಿ ಕೈಕೊಟ್ಟರು. ಆದರೆ ಹ್ಯಾರಿ ಬ್ರೂಕ್ 93 ಎಸೆತಗಳಲ್ಲಿ 75 ರನ್‌ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಗೆಲುವಿಗೆ 21 ರನ್‌ ಬೇಕಿದ್ದಾಗ ಹ್ಯಾರಿ ಬ್ರೂಕ್ ಔಟಾದಾಗ ತಂಡ ಮತ್ತೆ ಸಂಕಷ್ಟಕ್ಕೊಳಗಾಯಿತು. ಆದರೆ ಕ್ರಿಸ್‌ ವೋಕ್ಸ್‌(ಔಟಾಗದೆ 32), ಮಾರ್ಕ್‌ ವುಡ್‌(ಔಟಾಗದೆ 16) ತಂಡವನ್ನು ಗೆಲುವಿನ ದಡ ಸೇರಿಸಿದರು.

 

About Author

Leave a Reply

Your email address will not be published. Required fields are marked *

You may have missed