ಮೊಹಮ್ಮದ್ ಶಮಿ ದಾಂಪತ್ಯದಲ್ಲಿ ಬಿರುಕು: ಪತ್ನಿಗೆ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ

0

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವೈಯಕ್ತಿಕ ಜೀವನದ ವಿಚಾರವಾಗಿ ದೊಡ್ಡ ಸುದ್ದಿ ಹೊರಬಿದ್ದಿದೆ. ಕೋಲ್ಕತ್ತಾ ಕೋರ್ಟ್ ಭಾರತದ ವೇಗದ ಬೌಲರ್‌ಗೆ ಮಾಸಿಕ ಐವತ್ತು ಸಾವಿರ ರೂಪಾಯಿಗಳ ಜೀವನಾಂಶವನ್ನು ತನ್ನಿಂದ ದೂರ ವಾಸ ಮಾಡುತ್ತಿರುವ ಪತ್ನಿ ಹಸಿನ್ ಜಹಾನ್‌ಗೆ ನೀಡುವಂತೆ ಆದೇಶಿಸಿದೆ.

ಅಲಿಪೋರ್ ನ್ಯಾಯಾಲಯದ ನ್ಯಾಯಾಧೀಶೆ ಅನಿಂದಿತಾ ಗಂಗೂಲಿ ಈ ಪ್ರಕರಣದ ತೀರ್ಪು ಪ್ರಕಟಿಸಿದರು. ಆದರೆ, ಹಸಿನ್ ಜಹಾನ್‌ಗೆ ಈ ಮೊತ್ತದಿಂದ ಸಂತಸವಾಗಿಲ್ಲ. ಹಸಿನ್‌ ಜಹಾನ್‌ ತಿಂಗಳಿಗೆ 10 ಲಕ್ಷ ರೂಪಾಯಿ ಜೀವನಾಂಶದ ಬೇಡಿಕೆ ಇಟ್ಟಿದ್ದರು. 2018 ರಲ್ಲಿ, ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿ ಕಾನೂನು ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ ಹಸಿನ್ ಜಹಾನ್ ಅವರು ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂಪಾಯಿ ಮತ್ತು ಮಗಳ ಪೋಷಣೆಗಾಗಿ ತಿಂಗಳಿಗೆ 3 ಲಕ್ಷ ರೂಪಾಯಿ ಜೀವನಾಂಶವನ್ನು ಬಯಸಿದ್ದರು. ಈ ತೀರ್ಪಿನ ವಿರುದ್ಧ ಹಸಿನ್ ಜಹಾನ್ ಈಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

2018 ರಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಶಮಿ ಪತ್ನಿ ಹಸಿನ್ ಜಹಾನ್ ಈ ತಂಡದ ಪ್ರಮುಖ ಆಟಗಾರನ ಮೇಲೆ ಕೌಟುಂಬಿಕ ದೌರ್ಜನ್ಯ, ಮ್ಯಾಚ್ ಫಿಕ್ಸಿಂಗ್, ವರದಕ್ಷಿಣೆ ಕಿರುಕುಳದಂತಹ ಗಂಭೀರ ಆರೋಪಗಳನ್ನು ಮಾಡಿದ್ದರು. ಇದಾದ ಬಳಿಕ ಮೊಹಮ್ಮದ್ ಶಮಿ ಪತ್ನಿಯ ಆರೋಪಕ್ಕೆ ಸ್ಪಷ್ಟನೆ ನೀಡಿದ್ದರು. ನಂತರ ಶಮಿ ಮತ್ತು ಹಸಿನ್ ಜಹಾನ್ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು.

ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಶಮಿ, ‘ಹಸಿನ್‌ ಮತ್ತು ಅವರ ಕುಟುಂಬ ಸದಸ್ಯರು ಎಲ್ಲಾ ವಿಷಯಗಳ ಬಗ್ಗೆ ಕುಳಿತು ಮಾತನಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಅವರನ್ನು ಯಾರು ಪ್ರಚೋದಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ನಡೆಯುತ್ತಿರುವುದೆಲ್ಲವೂ ಸಂಪೂರ್ಣ ಸುಳ್ಳು. ನನ್ನ ವಿರುದ್ಧ ದೊಡ್ಡ ಪಿತೂರಿ ನಡೆಯುತ್ತಿದೆ. ಇದು ನನ್ನ ಮಾನಹಾನಿ ಅಥವಾ ನನ್ನ ವೃತ್ತಿಜೀವನವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿದೆ. ದೇಶಕ್ಕೆ ದ್ರೋಹ ಬಗೆಯುವುದಕ್ಕಿಂತ ಸಾಯುವುದನ್ನು ಇಷ್ಟಪಡುತ್ತೇನೆ ಎಂದು ಶಮಿ ಹೇಳಿದ್ದರು.

About Author

Leave a Reply

Your email address will not be published. Required fields are marked *

You may have missed