RCB ತಂಡಕ್ಕೆ ದುಬಾರಿ ಬೆಲೆಗೆ ಖರೀದಿಯಾದ ಸ್ಮ್ರುತಿ ಮಂದಾನ? ಯಾರ್ಯರು ಎಷ್ಟಕೆ ಖರೀದಿ

0

ಮುಂಬೈ: ಐಪಿಎಲ್ ಹರಾಜು (WPL Auction 2023) ಪ್ರಕ್ರಿಯೆಯಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮಂದಾನ (Smriti Mandhana) ದುಬಾರಿ ಬೆಲೆಗೆ ಆರ್‌ಸಿಬಿ (RCB) ತಂಡದ ಪಾಲಾಗಿದ್ದಾರೆ.

3.40 ಕೋಟಿ ರೂ.

ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಅವರನ್ನು ಖರೀದಿಸಿದೆ. ಈ ಮೂಲಕ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಲು ದುಬಾರಿ ಬೆಲೆ ವಿನಿಯೋಗಿಸಿದೆ.

ಮುಂಬೈನಲ್ಲಿ (Mumbai) ನಡೆದ ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮಂದಾನ ದುಬಾರಿ ಮೊತ್ತಕ್ಕೆ ಹರಾಜಾಗಿದ್ದು, ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 1.80 ಕೋಟಿ ರೂ.ಗಳಿಗೆ ಗುಜರಾತ್ ಫ್ರಾಂಚೈಸಿಗೆ ಸೇರ್ಪಡೆಯಾಗಿದ್ದಾರೆ.

ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯ ಸ್ಮೃತಿ ಮಂದಾನ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಸಾಕಷ್ಟು ಪೈಪೋಟಿ ನಡೆದಿತ್ತು. ಅಂತಿಮವಾಗಿ ಆರ್‌ಸಿಬಿ 3.4 ಕೋಟಿ ರೂ. ಗಳಿಗೆ ಮಂದಾನ ಅವರನ್ನ ಖರೀದಿಸುವಲ್ಲಿ ಯಶಸ್ವಿಯಾಯಿತು.

ಸ್ಮೃತಿ ಮಂದಾನ ಆರ್‌ಸಿಬಿ ಸೇರ್ಪಡೆಯಾಗುತ್ತಿದ್ದಂತೆ `ನಮಸ್ಕಾರ ಬೆಂಗಳೂರು’ ಎಂದು ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಆಸ್ಟೇಲಿಯಾ ತಂಡದ ಆಶ್ಲೀಗ್ ಗಾರ್ಡ್ನರ್ (Ashleigh Gardner) 3.2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದ್ದು, 2ನೇ ದುಬಾರಿ ಆಟಗಾರ್ತಿಯಾಗಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 1.8 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದರೆ, ದೀಪ್ತಿ ಶರ್ಮಾ (Deepti Sharma) 2.6 ಕೋಟಿಗೆ ಯುಪಿ ವಾರಿಯರ್ಸ್, ಶೆಫಾಲಿ ವರ್ಮಾ 1.90 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.

ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್(50 ಲಕ್ಷ ರೂ.), ಆಸ್ಟ್ರೇಲಿಯಾದ ಎಲ್ಲಿಸ್ ಪರ‍್ರೆ (1.7 ಕೋಟಿ ರೂ.) ಹಾಗೂ ರೇಣುಕಾ ಸಿಂಗ್ (1.5 ಕೋಟಿ ರೂ.) ಅವರನ್ನು ಆರ್‌ಸಿಬಿ ಖರೀದಿಸಿದೆ.

ಸೋಫಿ ಎಕ್ಲೆಸ್ಟೋನ್ 1.8 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಖರೀದಿಸಿದರೆ, ಇಂಗ್ಲೆಂಡ್‌ನ ನಟಾಲಿಯಾ ಸ್ಕಿವರ್‌ಗೆ ಮುಂಬೈ 3.2 ಕೋಟಿ ರೂ. ನೀಡಿದೆ. ತಾಲಿಯಾ ಮೆಕ್‌ಗ್ರಾತ್ ಅವರಿಗೆ ಯುಪಿ ವಾರಿಯರ್ಸ್ 1.4 ಕೋಟಿ ರೂ. ನೀಡಿದರೆ, ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಬೆತ್ ಮೂನಿ ಅವರನ್ನು 2 ಕೋಟಿ ರೂ.ಗೆ ಬಿಡ್ ಮಾಡಿ ಗೆದ್ದಿದೆ.

ಶಬ್ನಿಮ್ ಇಸ್ಮಾಯಿಲ್ ಅವರಿಗೆ ಯುಪಿ ವಾರಿಯರ್ಸ್ 1 ಕೋಟಿ ರೂ. ನೀಡಿದರೆ, ಮುಂಬೈ ಇಂಡಿಯನ್ಸ್ ಅಮೆಲಿಯಾ ಕೆರ್ ಅವರನ್ನು 1 ಕೋಟಿ ರೂ.ಗೆ ಬಿಡ್ ಮಾಡಿದೆ.

About Author

Leave a Reply

Your email address will not be published. Required fields are marked *

You may have missed