ಆಕರ್ಷಕ ಸೆಂಚುರಿ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

0

ಹೊಸ ವರ್ಷ ಟೀಂ ಇಂಡಿಯಾ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಉತ್ತಮ ವರ್ಷವಾಗಿದೆ. ಟೀಂ ಇಂಡಿಯಾ ಸತತ ಗೆಲುವು ದಾಖಲಿ ಸುತ್ತಿದ್ದರೆ, ಇತ್ತ ವಿರಾಟ್ ಕೊಹ್ಲಿ ಸೆಂಚುರಿ ಸಾಧನೆ ಮಾಡುತ್ತಿದ್ದಾರೆ. 2023ರ ಆರಂಭಿದಿಂದ ಉತ್ತಮ ಪಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಇದೀಗ ಶ್ರೀಲಂಕಾ ವಿರುದ್ದದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದಾರೆ.

ಒಂದರ ಮೇಲೊಂದರಂತೆ ಸೆಂಚುರಿ ಸಿಡಿಸುತ್ತಿರುವ ಕೊಹ್ಲಿ, ಏಕದಿನ ವಿಶ್ವಕಪ್ ಟೂರ್ನಿಗೂ ಮೊದಲು ಬಲಿಷ್ಠ ತಂಡಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಸೆಂಚುರಿ ಮೂಲಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ ತವರಿನಲ್ಲಿ 20 ಸೆಂಚುರಿ ಸಿಡಿಸಿದ್ದಾರೆ.

ಇದೀಗ ಕೊಹ್ಲಿ 21 ಏಕದಿನ ಸೆಂಚುರಿ ಸಿಡಿಸುವ ಮೂಲಕ ತವರಿನ ಶತಕ ದಾಖಲೆ ಮುರಿದಿದ್ದಾರೆ. ಶ್ರೀಲಂಕಾ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಶಭಮನ್ ಗಿಲ್ ಸೆಂಚುರಿ ಬಳಿಕ ಇದೀಗ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ 46 ನೇ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಇದು ಎರಡನೇ ಸೆಂಚುರಿಯಾಗಿದೆ. ಕಳೆದ ನಾಲ್ಕು ಏಕದಿನ ಪಂದ್ಯದಲ್ಲಿ ಇದು 3ನೇ ಶತಕವಾಗಿದೆ. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 74ನೇ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed