ಟೆಸ್ಟ್ ಚಾಂಪಿಯನ್ಷಿಪ್ ಫೈನಲ್: ಭಾರತ ತಂಡವನ್ನುಆರಿಸಿದ ರವಿ ಶಾಸ್ತ್ರಿ!

0

ಹೊಸದಿಲ್ಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಜೂನ್ 7 ರಿಂದ 11ರವರೆಗೆ ಲಂಡನ್ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, ಭಾರತ ತಂಡದ ತಮ್ಮ ನೆಚ್ಚಿನ ಪ್ಲೇಯಿಂಗ್ XI ಆಯ್ಕೆ ಮಾಡಿದ್ದಾರೆ.
ಸತತ ಎರಡನೇ ಬಾರಿ ಫೈನಲ್ಗೆ ಅರ್ಹತೆ ಪಡೆದಿರುವ ಭಾರತ ತಂಡ ಪ್ರಶಸ್ತಿ ಗೆಲ್ಲಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಲಂಡನ್ನಲ್ಲಿ ಬೀಡು ಬಿಟ್ಟಿದೆ. ಈ ಮಹತ್ವದ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗುತ್ತಿವೆ. ಇದರ ನಡುವೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಸಂಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
2023ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಸಿಕೊಂಡು ಬಂದಿರುವ ಭಾರತ ತಂಡದ ಆಟಗಾರರು ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ತಮ್ಮ ನೆಚ್ಚಿನ ಭಾರತ ತಂಡದ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.
“ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಅನ್ನು ನೀವು ನೋಡುವುದಾದರೆ, ಕೊನೆಯ ಬಾರಿ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ತಂಡ ಫೈನಲ್ಗೆ ಪ್ರವೇಶ ಮಾಡಿತ್ತು. ಇದನ್ನು ಗಮನಿಸಿ ಇಲ್ಲಿನ ಕಂಡೀಷನ್ಸ್ಗೆ ಸೂಕ್ತವಾಗುವ ಪ್ಲೇಯಿಂಗ್ XI ಆರಿಸಬೇಕಾಗುತ್ತದೆ,” ಎಂದು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ರವಿ ಶಾಸ್ತ್ರಿ ಹೇಳಿದ್ದಾರೆ.
“ಕಳೆದ ಬಾರಿ ಸೌಥ್ಹ್ಯಾಮ್ಟನ್ ಹವಾಮಾನ ತುಂಬಾ ಕಠಿಣವಾಗಿತ್ತು. ಹಾಗಾಗಿ ಈ ಬಾರಿ ನಾನು 12 ಮಂದಿ ಆಟಗಾರರನ್ನು ಅಯ್ಕೆ ಮಾಡುತ್ತೇನೆ. ಇದರಲ್ಲಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಿದರೆ, ಚೇತೇಶ್ವರ್ ಪೂಜಾರ 3ನೇ, ವಿರಾಟ್ ಕೊಹ್ಲಿ 4ನೇ ಹಾಗೂ 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆಗೆ ಅವಕಾಶ ನೀಡುತ್ತೇನೆ,” ಎಂದು ತಿಳಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ರವಿ ಶಾಸ್ತ್ರಿ ಆಯ್ಕೆಯ ಭಾರತ ಪ್ಲೇಯಿಂಗ್ XI
1. ರೋಹಿತ್ ಶರ್ಮಾ (ನಾಯಕ/ಓಪನರ್)
2.ಶುಭಮನ್ ಗಿಲ್ (ಓಪನರ್)
3. ಚೇತೇಶ್ವರ್ ಪೂಜಾರ (ಬ್ಯಾಟ್ಸ್ಮನ್)
4. ವಿರಾಟ್ ಕೊಹ್ಲಿ (ಬ್ಯಾಟ್ಸ್ಮನ್)
5. ಅಜಿಂಕ್ಯ ರಹಾನೆ (ಬ್ಯಾಟ್ಸ್ಮನ್)
6.ಕೆ.ಎಸ್ ಭರತ್ (ವಿ.ಕೀ)/ಇಶಾನ್ ಕಿಶನ್ (ವಿ.ಕೀ)
7. ರವಿಚಂದ್ರನ್ ಅಶ್ವಿನ್ (ಆಲ್ರೌಂಡರ್)/ಉಮೇಶ್ ಯಾದವ್
8. ರವೀಂದ್ರ ಜಡೇಜಾ (ಆಲ್ರೌಂಡರ್)
9.ಶಾರ್ದುಲ್ ಠಾಕೂರ್ (ವೇಗದ ಬೌಲರ್)
10.ಮೊಹಮ್ಮದ್ ಶಮಿ (ವೇಗದ ಬೌಲರ್)
11. ಮೊಹಮ್ಮದ್ ಸಿರಾಜ್ (ವೇಗದ ಬೌಲರ್)

About Author

Leave a Reply

Your email address will not be published. Required fields are marked *

You may have missed