ಬೆಟ್ಟಿಂಗ್ ಆಯಪ್ ಜತೆ ನಂಟು: ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ..!

0

ಲಂಡನ್: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕ್ಕಲಂ ’22 ಬೆಟ್’ ಹೆಸರಿನ ಆನ್‌ಲೈನ್‌ ಬೆಟ್ಟಿಂಗ್ ಆಯಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ(ಇಸಿಬಿ) ತನಿಖೆ ಆರಂಭಿಸಿದೆ. ಮೆಕ್ಕಲಂಗೆ ಬೆಟ್ಟಿಂಗ್ ಸಂಸ್ಥೆ ಜೊತೆಗಿನ ಸಂಬಂಧ ಹಾಗೂ ಮಂಡಳಿಯ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಮೆಕ್ಕಲಂ ಉಲ್ಲಂಘಿಸಿದ್ದಾರೆಯೇ ಎಂದು ಇಸಿಬಿ ಪರಿಶೀಲನೆ ನಡೆಸುತ್ತಿದೆ.

 

ಇನ್ನು ಇದೆಲ್ಲದರ ನಡುವೆಯೇ, ಬ್ರೆಂಡನ್ ಮೆಕ್ಕಲಂ ಅವರ ವಿರುದ್ದ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ನ್ಯೂಜಿಲೆಂಡ್‌ ಮಾಜಿ ನಾಯಕ ಜನವರಿಯಲ್ಲಿ 22 ಬೆಟ್‌ನ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಐಪಿಎಲ್‌ಗೆ ಸಂಬಂಧಿಸಿದ ಬೆಟ್ಟಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಬ್ರೂಕ್‌ ಶತಕಕ್ಕೆಬೆಚ್ಚಿದನೈಟ್ರೈಡರ್ಸ್!

ಕೋಲ್ಕತಾ: ಕೊನೆ ಕ್ಷಣ​ದಲ್ಲಿ ಬ್ಯಾಟಿಂಗ್‌​ನಲ್ಲಿ ಅಬ್ಬ​ರಿಸಿ ಕಳೆ​ದೆ​ರಡು ಪಂದ್ಯ​ಗ​ಳನ್ನು ತನ್ನ​ದಾ​ಗಿಸಿ​ಕೊಂಡಿದ್ದ ಕೋಲ್ಕ​ತಾ ಈ ಬಾರಿ ಅದೇ ಸಾಹಸ ಪ್ರದ​ರ್ಶಿ​ಸು​ವಲ್ಲಿ ವಿಫ​ಲ​ವಾ​ಯಿತು. ರಿಂಕು ಸಿಂಗ್‌ ಹಾಗೂ ನಿತೀಶ್‌ ರಾಣಾ ಮತ್ತೊಮ್ಮೆ ಸ್ಪೋಟಕ ಆಟವಾಡಿ​ದರೂ ಶುಕ್ರ​ವಾರ ತಂಡಕ್ಕೆ ಸನ್‌​ರೈ​ಸ​ರ್ಸ್ ಹೈದ​ರಾ​ಬಾದ್‌ ವಿರುದ್ಧ 23 ರನ್‌​ಗಳ ಸೋಲಿ​ನಿಂದ ತಪ್ಪಿ​ಸಲು ಆಗ​ಲಿಲ್ಲ. ಎರ​ಡು ಸೋಲಿ​ನೊಂದಿಗೆ ಟೂರ್ನಿಗೆ ಕಾಲಿ​ರಿ​ಸಿದ್ದ ಹೈದರ​ಬಾದ್‌ ಸತತ 2ನೇ ಜಯ ದಾಖ​ಲಿ​ಸಿ​ದರೆ, ಕೋಲ್ಕ​ತಾದ ಹ್ಯಾಟ್ರಿಕ್‌ ಗೆಲು​ವಿನ ಕನಸು ನನಸಾಗಲಿಲ್ಲ.

About Author

Leave a Reply

Your email address will not be published. Required fields are marked *

You may have missed