Australian Open. ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನೋವಾಕ್ ಜೋಕೋವಿಚ್

0

ಮೆಲ್ಬರ್ನ್‌: 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಕಾಲು ನೋವಿನ ಸಮಸ್ಯೆಯ ನಡುವೆಯೂ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಟೂರ್ನಿಯ 9 ಬಾರಿ ಚಾಂಪಿಯನ್‌ ಜೋಕೋ ಫ್ರಾನ್ಸ್‌ನ ಎನ್ಜೋ ಕೌಕಾಡ್‌ ವಿರುದ್ಧ 6-1, 6-7(5-7), 6-2, 6-0 ಸೆಟ್‌ಗಳಲ್ಲಿ ಜಯಿಸಿದರು.

 

ಸುಲಭವಾಗಿ ಮೊದಲ ಸೆಟ್‌ ಗೆದ್ದ ಜೋಕೋಗೆ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಜೊತೆಗೆ ಬಲಗಾಲಿನ ನೋವಿಗೂ ತುತ್ತಾಗಿ ವೈದ್ಯಕೀಯ ಸಹಾಯ ಪಡೆದರು. ಆದರೂ 3, 4ನೇ ಸೆಟ್‌ಗಳಲ್ಲಿ ಜೋಕೋ ತಮ್ಮ ನೈಜ ಆಟ ಪ್ರದರ್ಶಿಸಿ ಜಯಿಸಿದರು.

About Author

Leave a Reply

Your email address will not be published. Required fields are marked *

You may have missed