ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

0

ರಣಿ ನಿರ್ಧರಿಸುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ, ಸೂರ್ಯಕುಮಾರ್‌ ಯಾದವ್‌ರ ವಿಸ್ಫೋಟಕ ಶತಕದ ನೆರವಿನಿಂದ ಬೃಹತ್‌ ಮೊತ್ತ ಕಲೆಹಾಕಿದ ಭಾರತ, ಬೌಲಿಂಗ್‌ನಲ್ಲಿ ಅತಿಯಾಗಿ ವೈಡ್‌ಗಳನ್ನು ಎಸೆದು ಎಡವಟ್ಟು ಮಾಡಿದರೂ 91 ರನ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಸತತ 7ನೇ ಸರಣಿ ಗೆಲುವು ಸಂಪಾದಿಸಿದ ಟೀಂ ಇಂಡಿಯಾ,

ತವರಿನಲ್ಲಿ ಸತತ 12ನೇ ಸರಣಿಯಲ್ಲಿ ಅಜೇಯವಾಗಿ ಉಳಿಯಿತು. 6ನೇ ಯತ್ನದಲ್ಲಾದರೂ ಭಾರತ ನೆಲದಲ್ಲಿ ಟಿ20 ಸರಣಿ ಗೆಲ್ಲುವ ಶ್ರೀಲಂಕಾದ ಕನಸು ಕನಸಾಗಿಯೇ ಉಳಿಯಿತು. ಮೊದಲೆರಡು ಪಂದ್ಯಗಳಲ್ಲಿ ಕಂಡುಬರದ ಸಾಂಘಿಕ ಹೋರಾಟವನ್ನು ನಿರ್ಣಾಯಕ ಪಂದ್ಯದಲ್ಲಿ ತೋರಿ, ಭಾರತ ಟ್ರೋಫಿ ಎತ್ತಿಹಿಡಿಯಿತು.

ವಿಶ್ವ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ 2023ರ ಆರಂಭದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಅಂ.ರಾ.ಟಿ20ಯಲ್ಲಿ ಅತಿವೇಗವಾಗಿ 1500 ರನ್‌ ಪೂರೈಸಿದ ದಾಖಲೆ ಬರೆದರು. ಕೇವಲ 43 ಇನ್ನಿಂಗ್ಸಲ್ಲಿ (843 ಎಸೆತ) ಅವರು ಈ ಮೈಲಿಗಲ್ಲು ತಲುಪಿ ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಕಲಂರ ದಾಖಲೆ ಮುರಿದರು. ಮೆಕ್ಕಲಂ 49 ಇನ್ನಿಂಗ್ಸಲ್ಲಿ 1500 ರನ್‌ ಬಾರಿಸಿದ್ದರು. ಸೂರ್ಯ 43 ಇನ್ನಿಂಗ್ಸಲ್ಲಿ 46.41ರ ಸರಾಸರಿಯಲ್ಲಿ 1578 ರನ್‌ ಕಲೆಹಾಕಿದ್ದಾರೆ. ಅವರ ಸ್ಟೆರೖಕ್‌ರೇಟ್‌ 180.34 ಇದೆ. 3 ಶತಕ, 13 ಅರ್ಧಶತಕ ದಾಖಲಿಸಿದ್ದಾರೆ. ಭಾರತ ಪರ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಸೂರ್ಯ ಸದ್ಯ 7ನೇ ಸ್ಥಾನದಲ್ಲಿದ್ದು, ಇನ್ನು 182 ರನ್‌ ಗಳಿಸಿದರೆ 4ನೇ ಸ್ಥಾನಕ್ಕೇರಲಿದ್ದಾರೆ.

About Author

Leave a Reply

Your email address will not be published. Required fields are marked *

You may have missed