ಮಹೇಂದ್ರ ಸಿಂಗ್ ಧೋನಿ ಜೊತೆ ಬೈಕ್ ರೈಡಿಂಗ್ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ

0

ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಟೀಂ ಇಂಡಿಯಾದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಬೈಕ್ ರೈಡಿಂಗ್ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಧೋನಿ ತವರು ರಾಂಚಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಹಾಗಾಗಿ ಪಾಂಡ್ಯ ರಾಂಚಿಗೆ ಬಂದಿದ್ದಾರೆ. ಈ ವೇಳೆ ಧೋನಿಯನ್ನು ಭೇಟಿ ಮಾಡಿರುವ ಪಾಂಡ್ಯ ಹಳೆಯ ಬೈಕ್ ಒಂದರಲ್ಲಿ ಕೂತು ಫೋಸ್ ನೀಡಿದ್ದಾರೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಂಡ್ಯ ಶೋಲೆ 2 ಕಮಿಂಗ್ ಸೋನ್ ಎಂದು ಬರೆದುಕೊಂಡಿದ್ದಾರೆ. ಧೋನಿ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಹಳೆಯ ಬೈಕ್ ಮತ್ತು ಕಾರ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಧೋನಿ ಬೈಕ್ ಪ್ರಿಯರಾಗಿದ್ದು ತಮ್ಮಲ್ಲಿ ಹಲವು ಕಂಪನಿಯ ಪ್ರಸಿದ್ಧ ಬೈಕ್‍ಗಳನ್ನು ಇಟ್ಟುಕೊಂಡಿದ್ದಾರೆ. ಧೋನಿ ಜೊತೆ ಪಾಂಡ್ಯ ಉತ್ತಮ ಬಾಂಧವ್ಯ ಹೊಂದಿದ್ದು, ಧೋನಿ ನಾಯಕರಾಗಿದ್ದಾಗ 2016ರಲ್ಲಿ ಪಾಂಡ್ಯ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು.

About Author

Leave a Reply

Your email address will not be published. Required fields are marked *

You may have missed