ಇಂಗ್ಲೆಂಡ್‌ನಲ್ಲಿ ಆಷಸ್ ಗೆಲ್ಲುವುದೇ ನಮ್ಮ ಗುರಿ: ಮಿಚೆಲ್ ಸ್ಟಾರ್ಕ್

0

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಪಟ್ಟ ದಕ್ಕಿಸಿಕೊಂಡಿರುವ ಆಸ್ಟ್ರೇಲಿಯಾದ ಮುಂದಿನ ಗುರಿ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರತಿಷ್ಠಿತ ಆಷಸ್ ಸರಣಿ ಗೆದ್ದು ನೂತನ ಮೈಲುಗಲ್ಲು ಸ್ಥಾಪಿಸುವುದಾಗಿದೆ ಎಂದು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡವು ಸ್ಟೀವ್ ವಾ ಸಾರಥ್ಯದಲ್ಲಿ 2001ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಆಂಗ್ಲರನ್ನು ಮಣಿಸಿ ಆಷಸ್ ಟ್ರೋಫಿ ಜಯಿಸಿತ್ತು. 2019ರಲ್ಲಿ ಇಂಗ್ಲೆಂಡ್ ತಂಡವನ್ನು ಅದರ ತವರು ನೆಲದಲ್ಲೇ ಮಣಿಸುವ ಸುವರ್ಣಾವಕಾಶ ಒದಗಿ ಬಂದಿತ್ತಾದರೂ ಅಂತಿಮ ಪಂದ್ಯದಲ್ಲಿ ಸೋಲು ಕಂಡು ಸರಣಿಯನ್ನು 2-2 ರಿಂದ ಸಮಬಲಗೊಳಿಸಿಕೊಂಡಿತ್ತು.

ಇಂಗ್ಲೆಂಡ್ ನ ದಿ ಓವಲ್ ಮೈದಾನದಲ್ಲಿ ಬಲಿಷ್ಠ ಟೀಮ್ ಇಂಡಿಯಾವನ್ನು ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ 209 ರನ್ ಗಳಿಂದ ಮಣಿಸಿರುವ ಆಸ್ಟ್ರೇಲಿಯಾ ಆಟಗಾರರು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಇಂಗ್ಲೆಂಡ್ ತಂಡವನ್ನು ಅದರ ತವರು ನೆಲದಲ್ಲೇ ಆಷಸ್ ಸರಣಿಯಲ್ಲಿ ಮಣಿಸಿ ನೂತನ ಮೈಲುಗಲ್ಲು ಸ್ಥಾಪಿಸಲಿದೆ ಎಂದು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಗಾರ್ಡಿಯನ್‌ಗೆ ತಿಳಿಸಿದ್ದಾರೆ.

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹಾಗೂ ಹೆಡ್ ಕೋಚ್ ಬ್ರೆಡಂ ಮೆಕುಲಂ ಗರಡಿಯಲ್ಲಿ ಬೇಜ್ ಬಾಲ್ ಮಂತ್ರ ಅಳವಡಿಸಿಕೊಂಡಿದ್ದು, ಆಡಿರುವ 13 ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಯಶಸ್ವಿ ತಂಡವೆನಿಸಿಕೊಂಡಿದೆ. ಇಂಗ್ಲೆಂಡ್ ಕಳೆದ 12 ತಿಂಗಳಲ್ಲಿ ವಿವಿಧ ತಂಡಗಳ ವಿರುದ್ಧ ಬೇರೆ ಬೇರೆ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿರಬಹುದು ಆದರೆ ಇದರ ಅಳುಕು ಆಸ್ಟ್ರೇಲಿಯಾ ತಂಡಕ್ಕೆ ಇಲ್ಲ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed